GoodReturns

ಹೊಸ ಸೂಪರ್ ಸ್ಪ್ಲೆಂಡರ್ ಬಿಡುಗಡೆ ಮಾಡಿದ ಹೀರೋ ಮೋಟೊಕಾರ್ಪ್ : ಬೆಲೆ ಎಷ್ಟು ಗೊತ್ತಾ?

7 hours ago  
ಉದ್ಯಮ / GoodReturns/ Classroom  
ಬಹುದೊಡ್ಡ ದ್ವಿಚಕ್ರ ವಾಹನ ತಯಾರಕಾ ಕಂಪನಿ ಹೀರೋ ಮೋಟೊಕಾರ್ಪ್ ಗುರುವಾರ ತನ್ನ ಜನಪ್ರಿಯ ಮೋಟಾರ್ ಸೈಕಲ್ ಮಾದರಿಯಾದ ಸೂಪರ್‌ ಸ್ಪ್ಲೆಂಡರ್ ಬಿಎಸ್-VI ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸೂಪರ್‌ ಸ್ಪ್ಲೆಂಡರ್ ಬಿಎಸ್-VI ಹೊಸ ಬೈಕ್ 125ಸಿಸಿ ಎಂಜಿನ್‌ ಹೊಂದಿದ್ದು, ಇದರ ಬೆಲೆಯು 67,300 ರುಪಾಯಿ (ಎಕ್ಸ್‌ಶೋರೂಂ, ದೆಹಲಿ) ಯಿಂದ ಪ್ರಾರಂಭವಾಗುತ್ತದೆ. ಸೂಪರ್‌ ಸ್ಪ್ಲೆಂಡರ್ ಬಿಎಸ್-VI ಎರಡು..
                 

ಸಿನಿಮಾಗಳ ವಿಲನ್ ಬಳಸಬಾರದಂತೆ ಆಪಲ್ ಮೊಬೈಲ್ ಫೋನ್

11 hours ago  
ಉದ್ಯಮ / GoodReturns/ Classroom  
ಆಪಲ್ ಕಂಪೆನಿಯ ಫೋನ್ ಬಗ್ಗೆ ಚಿತ್ರಕರ್ಮಿ ರಿಯಾನ್ ಜಾನ್ಸನ್ ಆಸಕ್ತಿಕರ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ಕೇಳುವುದಕ್ಕೆ ಇದೊಂಥರಾ ತಮಾಷೆ ಅನಿಸಬಹುದು. ಆದರೆ ಹೀಗೊಂದು ನಿಯಮವನ್ನು ಆಪಲ್ ಕಂಪೆನಿ ಮಾಡಿದೆಯಂತೆ. ಯಾವುದಾದರೂ ಸಿನಿಮಾದಲ್ಲಿ ವಿಲನ್ ಅಥವಾ ಕೆಟ್ಟ ಪಾತ್ರಗಳು ಐಫೋನ್ ಬಳಸಬಾರದು ಎಂದು ಆಪಲ್ ಕಡ್ಡಾಯ ಮಾಡಿದೆಯಂತೆ. ವಿಡಿಯೋ ಸಂದರ್ಶನವೊಂದರಲ್ಲಿ ವ್ಯಾನಿಟಿ ಫೇರ್ ಜತೆಗೆ ಮಾತನಾಡಿರುವ ಜಾನ್ಸನ್, ಈಚೆಗಿನ..
                 

ನೋಟು ನಿಷೇಧ ಕಾಲದ ಲೆಕ್ಕ ಕೇಳಿ ಚಾಟಿ ಬೀಸುತ್ತಿರುವ ಐ.ಟಿ.

13 hours ago  
ಉದ್ಯಮ / GoodReturns/ Classroom  
ಭಾರತದ ಆಭರಣ ಮಾರಾಟಗಾರರು ಕೆಲವರಿಗೆ ಆದಾಯ ತೆರಿಗೆ ನೋಟಿಸ್ ಬರುತ್ತಿದೆ. ಮೂರು ವರ್ಷದ ಹಿಂದೆ ನಡೆಸಿದ ವ್ಯವಹಾರದ ಲೆಕ್ಕಪತ್ರಗಳನ್ನು ಕೇಳಿ, ಈಗ ಐಟಿ ಇಲಾಖೆಯಿಂದ ಲೆಕ್ಕವನ್ನು ಕೇಳಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ 2016ರ ನವೆಂಬರ್ ನಲ್ಲಿ ನೋಟು ನಿಷೇಧ ಮಾಡಿದ್ದರಲ್ಲ, ಆ ಅವಧಿಯಲ್ಲಿನ ಲೆಕ್ಕ ಕೇಳಿ ನೋಟಿಸ್ ನೀಡಲಾಗಿದೆ ಹತ್ತಕ್ಕೂ ಹೆಚ್ಚು ಮಂದಿ ಆಭರಣ ಮಾರಾಟಗಾರರು ಒಪ್ಪಿಕೊಂಡಿದ್ದಾರೆ...
                 

ವಿಶ್ವದ 10 ಸಣ್ಣ ದೇಶಗಳು; ಕೆಲವು ಬೆಂಗಳೂರಿನ 1 ವಾರ್ಡ್ ನಷ್ಟೂ ಇಲ್ಲ

18 hours ago  
ಉದ್ಯಮ / GoodReturns/ Classroom  
                 

ಇಂಜಿನಿಯರ್ ಆದ್ರೂ ಮಿಡಿ ಸೌತೆ ಬೆಳೆದು ಲಾಭ ಕಂಡ ಕೆ.ಆರ್.ಪೇಟೆಯ ಅರವಿಂದ್

yesterday  
ಉದ್ಯಮ / GoodReturns/ Classroom  
ಕೃಷಿ ಕ್ಷೇತ್ರ ಲಾಭದಾಯಕವಲ್ಲ, ಹೆಚ್ಚು ವಿದ್ಯಾವಂತರಲ್ಲದವರು ಮಾಡುವ ಕೆಲಸ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಈ ಕ್ಷೇತ್ರಕ್ಕೂ ವಿದ್ಯಾವಂತರು ಕಾಲಿಟ್ಟು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಕೃಷಿಯಲ್ಲೂ ಲಾಭ ಗಳಿಸಬಹುದು ಎಂಬುದನ್ನು ಕೆ.ಆರ್.ಪೇಟೆ ತಾಲೂಕಿನ ಆಘಲಯ ಸಮೀಪದ ಇಂಜಿನಿಯರ್ ಅರವಿಂದ್ ಎಂಬುವರು ತೋರಿಸಿಕೊಟ್ಟಿದ್ದಾರೆ. ಇಂಜಿನಿಯರ್ ಪದವಿ ಮಾಡಿದ ಬಳಿಕ ಬೆಂಗಳೂರಿನಲ್ಲಿ ಉತ್ತಮ ವೇತನ ಬರುವ ಕೆಲಸದಲ್ಲಿದ್ದರೂ ಅದನ್ನು ಬಿಟ್ಟು..
                 

ಬೇಕರಿಗಳಲ್ಲಿ ಸಿಹಿ ತಿನಿಸುಗಳಿಗೆ ಎಕ್ಸ್‌ಪೆರಿ ಡೇಟ್ ನಮೂದಿಸುವುದು ಕಡ್ಡಾಯ: ಜೂನ್‌ 1ರಿಂದ ಹೊಸ ನಿಯಮ ಜಾರಿ

yesterday  
ಉದ್ಯಮ / GoodReturns/ Classroom  
ಬೇಕರಿಗಳಲ್ಲಿ ಬಣ್ಣ ಬಣ್ಣದ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುತ್ತದೆ. ಸಿಹಿ ಪ್ರಿಯರಿಗಂತೂ ಬೇಕರಿಯಲ್ಲಿ ಬಹುತೇಕ ಎಲ್ಲವೂ ಇಷ್ಟ. ಆದರೆ ನೀವು ಯಾವುದಾದರೂ ಬೇಕರಿಯಲ್ಲಿ ಸಿಹಿ ತಿನಿಸುಗಳ ಮೇಲೆ ತಯಾರಿಕೆ ದಿನಾಂಕ ಮತ್ತು ಎಕ್ಸ್‌ಪೆರಿ ಡೇಟ್ ನಮೂದಿಸಿರೋದು ನೋಡಿದ್ದೀರಾ? ಬಹುತೇಕ ಸಾಧ್ಯತೆಯು ಇಲ್ಲ ಬಿಡಿ, ಆದರೆ ಇನ್ನು ಮುಂದೆ ಸಿಹಿತಿನಿಸುಗಳ ಅಂಗಡಿಗಳು, ಬೇಕರಿಗಳಲ್ಲಿ ಪ್ಯಾಕಿಂಗ್‌ ಮಾಡದೇ ಟ್ರೇಗಳಲ್ಲಿ ಹಾಗೂ..
                 

ಬೆಂಗಳೂರಿನ ಕಾಫಿ ಡೇ ಟೆಕ್‌ ಪಾರ್ಕ್ ಸ್ವಾಧೀನಕ್ಕೆ ಮುಂದಾದ ಬ್ಲ್ಯಾಕ್‌ ಸ್ಟೋನ್

yesterday  
ಉದ್ಯಮ / GoodReturns/ Classroom  
ದಿವಂಗತ ಉದ್ಯಮಿ ಸಿದ್ದಾರ್ಥ್ ಒಡೆತನದ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಟೆಕ್ನಾಲಜಿ ಪಾರ್ಕ್ ಅನ್ನು ಬ್ಲ್ಯಾಕ್‌ಸ್ಟೋನ್ ಗ್ರೂಪ್ ಇಂಕ್. ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು 'ಲೈವ್ ಮಿಂಟ್' ವರದಿ ಮಾಡಿದೆ. ಮೊದಲ ಹಂತವಾಗಿ 150 ಕೋಟಿ ರುಪಾಯಿ (21 ಮಿಲಿಯನ್ ಡಾಲರ್) ಅನ್ನು ಬುಧವಾರದಂದು ಪಾವತಿಸಲು ಸಿದ್ಧವಾಗಿದೆ ಎಂದು ಲೈವ್ ಮಿಂಟ್' ಹೇಳಿದೆ. ಗ್ಲೋಬಲ್ ವಿಲೇಜ್ ಟೆಕ್..
                 

ರಿಯಲ್ಮಿ ಸ್ಮಾರ್ಟ್ ಫೋನ್ ರಾಯಭಾರಿಯಾದ ಸಲ್ಮಾನ್ ಖಾನ್

yesterday  
ಉದ್ಯಮ / GoodReturns/ Classroom  
ಸ್ಮಾರ್ಟ್ ಫೋನ್ ಬ್ರ್ಯಾಂಡ್ ರಿಯಲ್ಮಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರಚಾರ ರಾಯಭಾರಿ (ಬ್ರ್ಯಾಂಡ್ ಅಂಬಾಸಡರ್) ಆಗಿದ್ದಾರೆ. ಸಲ್ಮಾನ್ ಖಾನ್ ರಿಯಲ್ಮಿ 6 ಮತ್ತು ರಿಯಾಲ್ಮಿ 6 ಪ್ರೋ ಫೋನ್ ಗಳಿಗೆ ಪ್ರಚಾರ ಮಾಡಲಿದ್ದಾರೆ ಎಂದು ಕಂಪೆನಿಯು ತಿಳಿಸಿದೆ. ಭಾರತದ ಎಲ್ಲ ಭಾಗಗಳಲ್ಲೂ ಸಲ್ಮಾನ್ ಖಾನ್ ಸಲ್ಲುವವರಾದ್ದರಿಂದ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ರಿಯಲ್ಮಿ ಕಂಪೆನಿಯ..
                 

ಹಾಂಕಾಂಗ್ ನಿವಾಸಿಗಳಿಗೆ 10,000 ಡಾಲರ್ ನೀಡಲು ಸರ್ಕಾರದ ಸಿದ್ಧತೆ

yesterday  
ಉದ್ಯಮ / GoodReturns/ Classroom  
ಹಾಂಕಾಂಗ್ ಸರ್ಕಾರದ ವಾರ್ಷಿಕ ಬಜೆಟ್ ನಲ್ಲಿ ಅಲ್ಲಿನ ಎಲ್ಲ ಶಾಶ್ವತ ನಿವಾಸಿಗಳಿಗೆ 10,000 ಹಾಂಕಾಂಗ್ ಡಾಲರ್ (ಭಾರತೀಯ ರುಪಾಯಿಗಳಲ್ಲಿ 92,000) ನಗದು ನೀಡಲು ಸಿದ್ಧತೆ ನಡೆಸಿದೆ. ಕೊರೊನಾ ವೈರಾಣು ವ್ಯಾಪಿಸಿರುವುದು ಹಾಗೂ ತಿಂಗಳಗಟ್ಟಲೆ ನಡೆದ ಸರ್ಕಾರದ ವಿರುದ್ಧದ ಪ್ರತಿಭಟನೆಯಿಂದ ಹೈರಾಣಾಗಿರುವವರಿಗೆ ಪರಿಹಾರ ರೂಪದಲ್ಲಿ ನೀಡಲು ಯೋಚಿಸಲಾಗಿದೆ. ಹಾಂಕಾಂಗ್ ನ ಶಾಶ್ವತ ನಿವಾಸಿಗಳಾಗಿರಬೇಕು ಹಾಗೂ 18 ವರ್ಷ ವಯಸ್ಸಿನ..
                 

EPF ಯೋಜನೆಯಲ್ಲಿ ಬದಲಾವಣೆ: ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ?

2 days ago  
ಉದ್ಯಮ / GoodReturns/ Personal Finance  
ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಕುರಿತಂತೆ ಕಾರ್ಮಿಕ ಸಚಿವಾಲಯವು ಇತ್ತೀಚೆಗಷ್ಟೇ ಮಹತ್ವದ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ, ನಿವೃತ್ತಿಯ 15 ವರ್ಷಗಳ ನಂತರ ಸಂಪೂರ್ಣ ಪಿಂಚಣಿಯನ್ನು EPF ಯೋಜನೆಯಂತೆ ಹಿಂಪಡೆಯಲು ನಿರ್ಧರಿಸಿರುವ ಪಿಂಚಣಿದಾರರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ. ಹಾಲಿ ನಿಯಮದಂತೆ ಇಪಿಎಸ್ -95 ಸದಸ್ಯರಿಗೆ ಪಿಂಚಣಿಯ ಮೂರನೇ ಒಂದು ಭಾಗವನ್ನು..
                 

ಹೋಂಡಾ ಡಿಯೋ BSVI ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

2 days ago  
ಉದ್ಯಮ / GoodReturns/ Classroom  
                 

ಮಾರ್ಚ್‌-ಏಪ್ರಿಲ್‌ನಿಂದ ಈ ಐದು ವಸ್ತುಗಳು ದುಬಾರಿಯಾಗಲಿದೆ

2 days ago  
ಉದ್ಯಮ / GoodReturns/ Classroom  
ಹೊಸ ಹಣಕಾಸಿನ ವರ್ಷ ಆರಂಭಕ್ಕೆ ಇನ್ನೇನು ಒಂದು ತಿಂಗಳು ಅಷ್ಟೇ ಬಾಕಿ ಉಳಿದಿದೆ. ಮಾರ್ಚ್ ಕೊನೆಗೊಂಡು ಏಪ್ರಿಲ್ ಆರಂಭದಿಂದ 2020-21 ರ ಹಣಕಾಸಿನ ವರ್ಷ ಆರಂಭಗೊಳ್ಳುತ್ತದೆ. ಅದರ ಜೊತೆಗೆ ಈ ಐದು ವಸ್ತುಗಳು ದುಬಾರಿಯಾಗಲಿವೆ. ಫೆಬ್ರವರಿ ಆರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದರು. ಅಲ್ಲದೆ ತೆರಿಗೆಯಲ್ಲಿ ಕೆಲ ಬದಲಾವಣೆಗಳನ್ನು ತರಲಾಯಿತು. 2020ರ ಬಜೆಟ್‌ನ..
                 

ಇನ್ ಸ್ಟಾಗ್ರಾಮ್ ನಲ್ಲಿ ವಿರಾಟ್ ಕೊಹ್ಲಿ ಒಂದು ಪೋಸ್ಟ್ ಗೆ ಸಿಗುತ್ತೆ 1.41 ಕೋಟಿ

2 days ago  
ಉದ್ಯಮ / GoodReturns/ Classroom  
ಸಿನಿಮಾ, ಕ್ರಿಕೆಟ್ ಭಾರತದ ಪಾಲಿಗೆ ಉಸಿರಾಟ ಇದ್ದಂತೆ. ಇನ್ನು ಚಿತ್ರ ನಟ- ನಟಿಯರು, ಕ್ರಿಕೆಟರ್ ಗಳ ಬಗೆಗಿನ ಅಭಿಮಾನವನ್ನು ಬರೀ ಮಾತಿನಲ್ಲಿ ಹೇಳುವುದು ಅಸಾಧ್ಯ. ಇದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್ ಮೀಡಿಯಾಗಳಲ್ಲಿ ಅವರಿಗೆ ಇರುವ ಫಾಲೋವರ್ಸ್ ಸಂಖ್ಯೆ ಕಾಣಸಿಗುತ್ತದೆ. ಇನ್ ಸ್ಟಾಗ್ರಾಮ್ ನಲ್ಲಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ..
                 

ವಿಶ್ವದ ಟಾಪ್ ಟೆನ್ ಶ್ರೀಮಂತ ರಾಷ್ಟ್ರಗಳಿವು: ಭಾರತ ಎಷ್ಟರಲ್ಲಿದೆ?

2 days ago  
ಉದ್ಯಮ / GoodReturns/ Classroom  
                 

ಪ್ರತಿಯೊಬ್ಬರೂ ಧೀರೂಭಾಯ್ ಅಂಬಾನಿ, ಬಿಲ್‌ಗೇಟ್ಸ್‌ ಆಗಬಹುದು : ಮುಕೇಶ್ ಅಂಬಾನಿ

3 days ago  
ಉದ್ಯಮ / GoodReturns/ Classroom  
ಭಾರತದಲ್ಲಿ ಯುವ ಉದ್ಯಮಿಗಳು ಬೆಳೆಯಲು ಅನುಕೂಲವಾದ ಪರಿಸ್ಥಿತಿ ಇದೆ. ಇಲ್ಲಿಯ ಪ್ರತಿಯೊಬ್ಬ ಸಣ್ಣ ಉದ್ಯಮಿ ಮತ್ತು ಉದ್ಯಮವೂ ಧೀರೂಭಾಯ್ ಅಂಬಾನಿಯೋ ಅಥವಾ ಬಿಲ್ ಗೇಟ್ಸ್ ಆಗುವ ಅವಕಾಶ ಹೊಂದಿದ್ದಾರೆ ಎಂದು ಆರ್‌ಐಎಲ್ ಚೇರ್‌ಮನ್ ಮುಕೇಶ್ ಅಂಬಾನಿ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ''ಫ್ಯೂಚರ್ ಡೀಕೋಡೆಡ್ ಸಿಇಒ 2020'' ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ..
                 

ಒನ್ ಪ್ಲಸ್ 8 ಮೊಬೈಲ್ ಫೋನ್ ಬಿಡುಗಡೆ ಬಗ್ಗೆ ಕಂಪೆನಿ ಸ್ಪಷ್ಟನೆ

3 days ago  
ಉದ್ಯಮ / GoodReturns/ Classroom  
                 

ಕೋಟ್ಯಂತರ ರು. ಬಾಕಿ ಉಳಿಸಿಕೊಂಡಿರುವ ಹ್ಯೂಸ್ ನೆಟ್‌ವರ್ಕ್ :ಅಪಾಯದಲ್ಲಿ ಭಾರತೀಯ ಬ್ಯಾಂಕಿಂಗ್, ರೈಲ್ವೆ ಸೇವೆ ?

3 days ago  
ಉದ್ಯಮ / GoodReturns/ Classroom  
ಯುಎಸ್ ಉಪಗ್ರಹ ಬ್ರಾಡ್‌ಬ್ಯಾಂಡ್ ಪೂರೈಕೆದಾರ ಹ್ಯೂಸ್ ನೆಟ್‌ವರ್ಕ್ ಸಿಸ್ಟಮ್ಸ್‌ ತನ್ನ ಭಾರತೀಯ ಕಾರ್ಯಾಚರಣೆಯನ್ನು ಸ್ಥಗಿಸಗೊಳಿಸಬಹುದಾದ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಭಾರತಕ್ಕೆ ಬ್ರಾಡ್‌ಬ್ಯಾಂಡ್ ಪೂರೈಕೆದಾರ ಆದ ಹ್ಯೂಸ್‌ ನೆಟ್‌ವರ್ಕ್‌ ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದರಿಂದ ದೇಶದ ಸಾವಿರಾರು ಬ್ಯಾಂಕಿಂಗ್ ಸೇವೆಗಳು ಅಪಾಯಕ್ಕೆ ತುತ್ತಾಗಬಹುದು ಎಂದು ಕಂಪನಿಯ ಪತ್ರವೊಂದರಲ್ಲಿ ಉಲ್ಲೇಖಿತವಾಗಿದೆ..
                 

ಟ್ರಂಪ್ ಉಳಿದುಕೊಳ್ಳುವ ಹೋಟೆಲ್ ಐಟಿಸಿ ಮೌರ್ಯ ಅಂದರೆ ಸುಮ್ನೆನಾ?

3 days ago  
ಉದ್ಯಮ / GoodReturns/ Classroom  
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಆದರೆ ಈ ಹಿಂದೆ ಅಮೆರಿಕದ ಅನೇಕ ಅಧ್ಯಕ್ಷರು ಭಾರತಕ್ಕೆ ಬಂದಿದ್ದಾರೆ. ಹಾಗೆ ಬಂದವರೆಲ್ಲ ಉಳಿದುಕೊಂಡಿರುವುದು ದೆಹಲಿಯಲ್ಲಿ ಇರುವ ಐಟಿಸಿ ಮೌರ್ಯ ಹೋಟೆಲ್ ನಲ್ಲಿ ಎಂಬುದು ಬಹಳ ಮಂದಿಗೆ ನೆನಪಿರಲಿಕ್ಕಿಲ್ಲ. ಐಟಿಸಿ ಮೌರ್ಯದ ವಿಲಾಸಿ ಪ್ರೆಸಿಡೆನ್ಷಿಯಲ್ ಸ್ವೀಟ್ ಗೆ 'ಚಾಣಕ್ಯ' ಎಂದು ಹೆಸರಿಡಲಾಗಿದೆ. ಖಾಸಗಿ ಹಜಾರ,..
                 

ಮಾರ್ಚ್ 1ರಿಂದ ಲಾಟರಿಗೆ ಒಂದೇ ರೀತಿ ತೆರಿಗೆ; ಎಷ್ಟು ಪರ್ಸೆಂಟ್ ಗೊತ್ತಾ?

3 days ago  
ಉದ್ಯಮ / GoodReturns/ Classroom  
ಇದೇ ಮಾರ್ಚ್ 1ರಿಂದ ಅನ್ವಯ ಆಗುವಂತೆ ಲಾಟರಿಗೆ ಏಕರೂಪದಲ್ಲಿ 28 ಪರ್ಸೆಂಟ್ ವಿಧಿಸಲಾಗುತ್ತದೆ. ಈ ದರ ಮಾರ್ಚ್ 1ರಿಂದ, ರಾಜ್ಯ ಸರ್ಕಾರಗಳು ಹಾಗೂ ಅಧಿಕೃತವಾಗಿ ಲಾಟರಿ ನಡೆಸುವಂತಹದ್ದಕ್ಕೆ ಅನ್ವಯಿಸುತ್ತದೆ. ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿತ್ತು. ಲಾಟರಿಗಳ ಮೇಲೆ ತೆರಿಗೆ ದರ ಏರಿಕೆ ಮಾಡುವುದು..
                 

ಚೀನಾವನ್ನು ಹಿಂದಿಕ್ಕಿ ಭಾರತದೊಂದಿಗೆ ವ್ಯಾಪಾರ ಪಾಲುದಾರಿಕೆ ಹೆಚ್ಚಿಸಿಕೊಂಡ ಅಮೆರಿಕಾ

4 days ago  
ಉದ್ಯಮ / GoodReturns/ Classroom  
ಫೆಬ್ರವರಿ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತಕ್ಕೆ ಬಂದಿಳಿಯುವ ಮೊದಲೇ ವಾಣಿಜ್ಯ ಸಚಿವಾಲಯವು ಮಾಹಿತಿ ಹೊರಹಾಕಿದ್ದು ಚೀನಾಗಿಂತಲೂ ಅಮೆರಿಕಾವೇ ಉನ್ನತ ಪಾಲುದಾರನಾಗಿದೆ. ಉಭಯ ದೇಶಗಳ ನಡುವೆ ಹೆಚ್ಚಿನ ಆರ್ಥಿಕ ಸಂಬಂಧಗಳು ಅಮೆರಿಕಾ ದೇಶವು ಚೀನಾವನ್ನು ಹಿಂದಿಕ್ಕಲು ಸಾಧ್ಯವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ 2018-19ರಲ್ಲಿ ಅಮೆರಿಕಾ ಮತ್ತು ಭಾರತದ ನಡುವಿನ..
                 

ಮಾರ್ಚ್‌ 1ರಿಂದ ಸಿಗಲ್ಲ 2,000 ರುಪಾಯಿ ನೋಟು

4 days ago  
ಉದ್ಯಮ / GoodReturns/ Classroom  
ಎದುರಾಗುತ್ತಿರುವ ಚಿಲ್ಲರೆ ಸಮಸ್ಯೆಯನ್ನು ತಗ್ಗಿಸಲು 2000 ರೂಪಾಯಿ ನೋಟುಗಳನ್ನು ಎಟಿಎಂ ಗಳಲ್ಲಿ ವಿತರಿಸುವುದನ್ನು ಮಾರ್ಚ್ 1 ರಿಂದ ಸ್ಥಗಿತಗೊಳಿಸುವುದಾಗಿ ಇಂಡಿಯನ್ ಬ್ಯಾಂಕ್ ಹೇಳಿದೆ. ಎಟಿಎಂ ಗಳಲ್ಲಿ 2000 ನೋಟುಗಳನ್ನು ಪಡೆಯುವ ಗ್ರಾಹಕರು, ಚಿಲ್ಲರೆ ಪಡೆಯಲು ಬ್ಯಾಂಕ್ ಗೆ ಬರುತ್ತಾರೆ. ಇದನ್ನು ತಡೆಯುವುದಕ್ಕಾಗಿ ಎಟಿಎಂ ಗಳಲ್ಲಿ ಮಾರ್ಚ್ 1 ರಿಂದ 2000 ರೂಪಾಯಿ ನೋಟಿನ ಬದಲು 200 ರೂಪಾಯಿ..
                 

ಕೊರೊನಾ ಆತಂಕ: ತುರ್ತಿಲ್ಲದಿದ್ದರೆ ಸಿಂಗಪೂರ್ ಗೆ ಹೋಗದಿರಿ ಎಂದ ಕೇಂದ್ರ

5 days ago  
ಉದ್ಯಮ / GoodReturns/ Classroom  
ತುರ್ತಾದ ಸನ್ನಿವೇಶ ಇಲ್ಲದಿದ್ದಲ್ಲಿ ಸಿಂಗಪೂರ್ ಗೆ ತೆರಳಬೇಡಿ ಎಂದು ಕೇಂದ್ರ ಸರ್ಕಾರವು ಶನಿವಾರ ಎಚ್ಚರಿಕೆ ನೀಡಿದೆ. ಕೊರೊನಾ ವೈರಾಣು ಭೀತಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ಕಠ್ಮಂಡು, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಮಲೇಷ್ಯಾದಿಂದ ಬರುವ ಪ್ರಯಾಣಿಕರನ್ನೂ ಸೋಮವಾರದಿಂದ ಭಾರತದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ. ಸದ್ಯಕ್ಕೆ ಚೀನಾ, ಹಾಂಕಾಂಗ್, ಥಾಯ್ಲೆಂಡ್, ದಕ್ಷಿಣ..
                 

1,000 ಕೋಟಿಯ ಬಂಗಲೆ 400 ಕೋಟಿಗೆ ಖರೀದಿ; ಅದಾನಿ ಗ್ರೂಪ್ ಬಂಪರ್

5 days ago  
ಉದ್ಯಮ / GoodReturns/ Classroom  
                 

7 ತಿಂಗಳ ಕನಿಷ್ಠಕ್ಕೆ ಕುಸಿದ ಡೀಸೆಲ್ ದರ, ಪೆಟ್ರೋಲ್ 5 ತಿಂಗಳಲ್ಲೇ ಕನಿಷ್ಠ

6 days ago  
ಉದ್ಯಮ / GoodReturns/ Classroom  
                 

1.10 ಲಕ್ಷದ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್

6 days ago  
ಉದ್ಯಮ / GoodReturns/ Classroom  
                 

ಜೂನ್ 30ರ ತನಕ ಭಾರತ- ಚೀನಾ ಮಧ್ಯೆ ಏರ್ ಇಂಡಿಯಾ ವಿಮಾನ ಇಲ್ಲ

7 days ago  
ಉದ್ಯಮ / GoodReturns/ Classroom  
ಈ ವರ್ಷದ ಜೂನ್ 30ನೇ ತಾರೀಕಿನ ತನಕ ಚೀನಾ ದೇಶಕ್ಕೆ ಯಾವುದೇ ವಿಮಾನ ಹಾರಾಟ ನಡೆಸದಿರುವುದಕ್ಕೆ ಏರ್ ಇಂಡಿಯಾ ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ಘೋಷಣೆ ಕೂಡ ಮಾಡಿದೆ. ಚೀನಾದಲ್ಲಿ ಕೊರೊನೊ ವೈರಾಣು ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದು, ಚೀನಿ ಅಧಿಕಾರಿಗಳು ರೋಗವನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಜನವರಿ 31ರಿಂದ ಫೆಬ್ರವರಿ 14ರ ತನಕ ದೆಹಲಿ- ಶಾಂಘೈ ಮಧ್ಯದ ಎಲ್ಲ..
                 

ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ

7 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯು ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ. ದೇಶದಲ್ಲಿ ಸತತ ಎರಡನೇ ದಿನವು ಚಿನ್ನದ ಬೆಲೆ ಏರಿಕೆಯಾಗಿದ್ದು, ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 200 ರುಪಾಯಿ ಹೆಚ್ಚಿದ್ದು, 10ಗ್ರಾಂಗೆ 38,460 ರುಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನ 10ಗ್ರಾಂಗೆ 42,900 ರುಪಾಯಿಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು..
                 

SBI ಕಾರ್ಡ್ಸ್ IPO ಮಾರ್ಚ್ 2ನೇ ತಾರೀಕಿನಿಂದ ಆರಂಭ

7 days ago  
ಉದ್ಯಮ / GoodReturns/ Classroom  
                 

ಫೆಬ್ರವರಿ ಕೊನೆಯಲ್ಲಿ ಟಿವಿ, ರೆಫ್ರಿಜರೇಟರ್, ಎಸಿ ಬೆಲೆ ದುಬಾರಿ

7 days ago  
ಉದ್ಯಮ / GoodReturns/ Classroom  
ಫೆಬ್ರವರಿ ಅಂತ್ಯದ ವೇಳೆಗೆ ಟಿವಿ, ಎಸಿ ಮತ್ತು ರೆಫ್ರಿಜರೇಟರ್ ಹಾಗೂ ಕೆಲವು ಸ್ಮಾರ್ಟ್ ಫೋನ್‌ಗಳ ದರ ಏರಿಕೆಯಾಗಲಿದೆ. ಚೀನಾದ ಕೊರೊನಾವೈರಸ್‌ ಪ್ರಭಾವವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಚೀನಾದಿಂದ ಆಮದಾಗುವ ಸರಕುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಟೀವಿ ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶವನ್ನೂ ಆಲೋಚಿಸಿ ಚೀನಾದಲ್ಲಿ ಕೊರೊನಾವೈರಸ್ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದ್ದು, ಉತ್ಪಾದನಾ..
                 

ಪ್ರಯಾಣಿಕರಿಗೆ 40,000 ಅಡಿ ಎತ್ತರದಿಂದ ಲೈವ್ ಕ್ರಿಕೆಟ್ ನೋಡುವ ಅವಕಾಶ!

8 days ago  
ಉದ್ಯಮ / GoodReturns/ Classroom  
ಸಿಂಗಾಪುರ್ ಏರ್‌ಲೈನ್ಸ್‌ ಲಿಮಿಟೆಡ್‌ನ ಭಾರತೀಯ ಅಂಗಸಂಸ್ಥೆಯಾದ ವಿಸ್ತಾರ ತನ್ನ ಹೊಸ ಬೋಯಿಂಗ್ ಕಂ 787 ಡ್ರೀಮ್‌ಲೈನರ್‌ ವಿಮಾನದಲ್ಲಿ ವೈ-ಫೈ ಮತ್ತು ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸುವ ದೇಶದ ಮೊದಲ ವಿಮಾನಯಾನ ಸಂಸ್ಥೆಯಾಗಲಿದೆ. ಪ್ರಯಾಣಿಕರು ಫೇಸ್‌ಬುಕ್ ಮತ್ತು ಮೆಸೇಜಿಂಗ್ ಸೇವೆ ವಾಟ್ಸಾಪ್, ಮತ್ತು ಲೈವ್-ಸ್ಟ್ರೀಮ್ ಕ್ರಿಕೆಟ್ ಪಂದ್ಯಗಳಂತಹ ಸೈಟ್‌ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಕ್ರಿಕೆಟ್ ಭಾರತದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ವಿಮಾನದಲ್ಲೇ..
                 

ಏಪ್ರಿಲ್ 1 ವಿಶ್ವದಲ್ಲೇ ಶುದ್ಧ ಪೆಟ್ರೋಲ್- ಡೀಸೆಲ್ ಬಳಕೆ ಭಾರತದಲ್ಲಿ ಆರಂಭದ ದಿನ

8 days ago  
ಉದ್ಯಮ / GoodReturns/ Classroom  
                 

ಡೊನಾಲ್ಡ್ ಟ್ರಂಪ್ 3 ಗಂಟೆ ಭೇಟಿಗೆ ಗುಜರಾತ್ ಸರ್ಕಾರಕ್ಕೆ ಎಷ್ಟು ಕೋಟಿ ಖರ್ಚು?

9 days ago  
ಉದ್ಯಮ / GoodReturns/ Classroom  
ಗುಜರಾತ್ ನ ಅಹ್ಮದಾಬಾದ್ ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಂದ ಹಾಗೆ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್. ಮಹಾತ್ಮ ಗಾಂಧಿ ಅವರ ಜನ್ಮ ಸ್ಥಳಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ ನೀಡಲಿದ್ದಾರೆ. ನಿಮಗೆ ನೆನಪಿರಲಿ, ಮೋದಿ ಪ್ರಧಾನಿಯಾದ ಮೇಲೆ ಚೀನಾ, ಜಪಾನ್ ಹಾಗೂ ಇಸ್ರೇಲ್ ನಾಯಕರು..
                 

2020ರಲ್ಲಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಆಗೋದು ತುಂಬಾ ಕಮ್ಮಿ : ದಶಕದಲ್ಲೇ ಅತಿ ಕಡಿಮೆ

9 days ago  
ಉದ್ಯಮ / GoodReturns/ Classroom  
ಇನ್ನೇನು 2019-20ರ ಹಣಕಾಸು ವರ್ಷ ಮುಕ್ತಾಯದ ಹಂತಕ್ಕೆ ಸಾಗುತ್ತಿದೆ. ಮಾರ್ಚ್ ಮುಗಿಯುತ್ತಿದ್ದಂತೆ ಉದ್ಯೋಗಿಗಳು ಸಂಬಳ ಹೆಚ್ಚಳ ಆಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಆದರೆ ವರದಿಯೊಂದರ ಪ್ರಕಾರ 2020ರಲ್ಲಿ ಭಾರತದ ಕಂಪನಿಗಳಲ್ಲಿ ಉದ್ಯೋಗಿಗಳ ಸಂಬಳ ಹೆಚ್ಚಳವು ದಶಕದಲ್ಲೇ ಅತಿ ಕಡಿಮೆ ಎಂದು ದಾಖಲಾಗಿದೆ. 2020ರಲ್ಲಿ ಭಾರತದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸರಾಸರಿ 9.1 ಪರ್ಸೆಂಟ್ ಸಂಬಳವನ್ನು ಹೆಚ್ಚಳ ಮಾಡುತ್ತವೆ..
                 

ವೊಡಾಫೋನ್ ಐಡಿಯಾ ಸಂಪರ್ಕ ಬಂದ್?

9 days ago  
ಉದ್ಯಮ / GoodReturns/ Classroom  
ದೇಶದ ಬಹುದೊಡ್ಡ ಟೆಲಿಕಾಂ ಸಂಪರ್ಕವನ್ನು ಹೊಂದಿರುವ ವೊಡಾಫೋನ್ ಐಡಿಯಾ ಸಂಪರ್ಕವನ್ನು ಕಡಿತಗೊಳಿಸಿಬಿಟ್ಟರೆ ಏನ್ ಗತಿ ಎಂಬುದು ಭಾರತದ ಮಾರುಕಟ್ಟೆಯಲ್ಲಿ ಸದ್ಯ ಓಡಾಡುತ್ತಿರುವ ಮಾತಾಗಿದೆ. ಇದಕ್ಕೆ ಕಾರಣ ಹೊಂದಾಣಿಕೆಯ ಒಟ್ಟು ಆದಾಯ ( AGR ) ಬಾಕಿ ಹಣವನ್ನು ಕೂಡಲೇ ಪಾವತಿಸಬೇಕಾಗಿ ಬಂದಿರುವ ಪರಿಸ್ಥಿತಿ. ಹೊಂದಾಣಿಕೆಯ ಒಟ್ಟು ಆದಾಯ (AGR) ಬಾಕಿ ಹಣ ಪಾವತಿಸುವ ವಿಚಾರವಾಗಿ ಮೊದಲ ಹಂತದಲ್ಲಿ..
                 

ಮಿಡತೆ ಕಾಟಕ್ಕೆ ಕಂಗೆಟ್ಟ ಪಾಕ್ ಗೆ ಭಾರತದಿಂದ ಕೀಟನಾಶಕ!

10 days ago  
ಉದ್ಯಮ / GoodReturns/ Classroom  
ಮಿಡತೆ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನವು ಭಾರತದಿಂದ ಕೀಟನಾಶಕವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಎರಡೂ ದೇಶಗಳ ಮಧ್ಯೆ ಯಾವುದೇ ವ್ಯಾಪಾರ- ವ್ಯವಹಾರಗಳು ನಡೆಯುತ್ತಿಲ್ಲ. ಕಳೆದ ಆಗಸ್ಟ್ ನಲ್ಲಿ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಪಾಕಿಸ್ತಾನವು ಭಾರತದ ಜತೆಗಿನ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧವನ್ನು ಕಡಿದುಕೊಂಡಿದೆ. ಜೂನ್- ಜುಲೈನಲ್ಲಿ..
                 

ವೊಡಾಫೋನ್ ಐಡಿಯಾಗೆ ಶಾಕ್ ನೀಡಿದ ಸುಪ್ರೀಂ: 2,500 ಕೋಟಿ ರುಪಾಯಿ ಮನವಿ ತಿರಸ್ಕಾರ

10 days ago  
ಉದ್ಯಮ / GoodReturns/ Classroom  
ಹೊಂದಾಣಿಕೆಯ ಒಟ್ಟು ಆದಾಯ (AGR) ಬಾಕಿ ಹಣ ಪಾವತಿಸುವ ವಿಚಾರವಾಗಿ ಮೊದಲ ಹಂತದಲ್ಲಿ 2,500 ಕೋಟಿಯನ್ನಷ್ಟೇ ಹಣ ಪಾವತಿ ಮಾಡುತ್ತೇವೆ ಎಂದು ವೊಡಾಫೋನ್ ಐಡಿಯಾ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಸೋಮವಾರ 2,500 ಕೋಟಿ ರುಪಾಯಿ ಪಾವತಿ ಮಾಡಿ, ಫೆಬ್ರವರಿ 21 ಕ್ಕೆ ಎರಡನೇ ಹಂತದಲ್ಲಿ 1,000 ಕೋಟಿ ರುಪಾಯಿ ಪಾವತಿಸುವುದಾಗಿ ಕೇಳಿಕೊಂಡಿತು. ಆದರೆ ವೊಡಾಫೋನ್ ಐಡಿಯಾ ಪ್ರಸ್ತಾವನೆಯನ್ನು..
                 

ಈ ನೈಟ್ ಕ್ಲಬ್ ನಲ್ಲಿ ಸಂಸ್ಕೃತ ಹಾಡು, ವೆಜ್ ಫುಡ್, ಸಿಗರೇಟ್- ಲಿಕ್ಕರ್ ನಾಟ್ ಅಲೋಡ್

10 days ago  
ಉದ್ಯಮ / GoodReturns/ Classroom  
ಭಾರತದ ನೈಟ್ ಕ್ಲಬ್ ಗಳು ಹೇಗಿರುತ್ತದೆ ಎಂಬ ಬಗ್ಗೆ ನಿಮಗೇನಾದರೂ ಗೊತ್ತಿದೆಯಾ? ನೀವೇನಾದರೂ ಹೋಗಿದ್ದರೆ ಅಥವಾ ಸಿನಿಮಾಗಳಲ್ಲಿ ನೋಡಿದ್ದರೆ ಗೊತ್ತಿರಬಹುದು. ಅಲ್ಲಿ ಹಿಂದಿ, ಪಂಜಾಬಿ ಅಥವಾ ಇಂಗ್ಲಿಷ್ ಹಾಡುಗಳನ್ನು ಹಾಕಲಾಗುತ್ತದೆ. ಅಲ್ಲಿ ಇಡೀ ರಾತ್ರಿ ಆ ಹಾಡುಗಳಿಗೆ ಹೆಜ್ಜೆ ಹಾಕಲಾಗುತ್ತದೆ. ಆದರೆ ಭಾರತದಿಂದ ದೂರದಲ್ಲಿ ಇರುವ ದೇಶವೊಂದರಲ್ಲಿ ವಿಶಿಷ್ಟವಾದ ನೈಟ್ ಕ್ಲಬ್ ವೊಂದಿದೆ. ಇಲ್ಲಿ ಜನರು ಸಂಸ್ಕೃತ..
                 

ಕೊರೊನಾ ವೈರಸ್ ಎಫೆಕ್ಟ್; 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು ತೈಲ ಬೆಲೆ

10 days ago  
ಉದ್ಯಮ / GoodReturns/ Classroom  
                 

ಭಾರತದ 2ನೇ ಅತಿದೊಡ್ಡ ಶ್ರೀಮಂತ ಡಿ-ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ

10 days ago  
ಉದ್ಯಮ / GoodReturns/ Classroom  
ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಸಂಸ್ಥಾಪಕ, ಡಿ-ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ಭಾರತದ ಎರಡನೇ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ರಿಲಿಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಬಳಿಕ ಭಾರತದ 2ನೇ ಅತಿದೊಡ್ಡ ಶ್ರೀಮಂತರಾಗಿದ್ದಾರೆ. ಅವೆನ್ಯೂ ಸೂಪರ್‌ಮಾರ್ಟ್ಸ್‌ ಸಂಸ್ಥಾಪಕ ರಾಧಾಕಿಶನ್ ದಮಾನಿ 17.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳು ಉತ್ತಮ..
                 

ಈ ರಾಜ್ಯದಲ್ಲಿರುವ PM-Kisan ಫಲಾನುಭವಿಗಳು 11 ರೈತರು ಮಾತ್ರ

11 days ago  
ಉದ್ಯಮ / GoodReturns/ Classroom  
                 

ಟೀವಿ ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶವನ್ನೂ ಆಲೋಚಿಸಿ

11 days ago  
ಉದ್ಯಮ / GoodReturns/ Personal Finance  
"ಮನೆಗೊಂದು ಟೀವಿ ತರಬೇಕು. ಯಾವುದು ತರಬೇಕು ಅನ್ನೋದೇ ಗೊತ್ತಾಗ್ತಿಲ್ಲ". ಇಂಥದ್ದೊಂದು ಮಾತು ನೀವು ಕೇಳಿಸಿಕೊಂಡಿದ್ದೀರಾ ಅಥವಾ ನೀವೇ ಆಡಿದ್ದೀರಾ? ಹಾಗಿದ್ದಲ್ಲಿ ನೀವು ಈ ಲೇಖನ ಓದಲೇಬೇಕು. ಏಕೆಂದರೆ, ಈ ಮಾತಿಗೂ ಥಿಯೇಟರ್ ಗಳಿಗೆ ಜನರೇ ಬರುತ್ತಿಲ್ಲ ಎಂಬ ಆಕ್ಷೇಪಕ್ಕೂ ಬಹಳ ಹತ್ತಿರದ ನಂಟಿದೆ. ಬದಲಾಗುತ್ತಿರುವ ತಂತ್ರಜ್ಞಾನ ಏನೇನು ಮಾಡಿದೆ ಅಥವಾ ಮಾಡ್ತಿದೆ ಎಂಬುದನ್ನು ತಿಳಿದುಕೊಳ್ಳದೆ ಹೋದರೆ ನಿಮ್ಮ..
                 

ಚಿನ್ನದ ಬೆಲೆಯಲ್ಲಿ ಏರಿಕೆ, ಬೆಳ್ಳಿ ಕೆಜಿಗೆ 500 ರುಪಾಯಿ ಹೆಚ್ಚಳ

12 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ(ಫೆಬ್ರವರಿ 15) 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 250 ರುಪಾಯಿ ಹೆಚ್ಚಿದ್ದು, ಚೆನ್ನೈನಲ್ಲಿ 400 ರುಪಾಯಿ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,450 ರುಪಾಯಿ ದಾಖಲಾಗಿದೆ. ಬೆಳ್ಳಿಯು ದರವು ಕೆಜಿಗೆ 500 ರುಪಾಯಿ ಏರಿಕೆಯಾಗಿದ್ದು, 49,500 ರುಪಾಯಿ ತಲುಪಿದೆ. ಅಂತಾರಾಷ್ಟ್ರೀಯ..
                 

ಪ್ಲೀಸ್, ಪ್ಲೀಸ್ ಹಣ ವಾಪಸ್ ತಗೊಳ್ಳಿ : ವಿಜಯ್ ಮಲ್ಯ

12 days ago  
ಉದ್ಯಮ / GoodReturns/ Classroom  
ಭಾರತೀಯ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಕೈಕೊಟ್ಟು ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ದಯವಿಟ್ಟು ನಿಮ್ಮ ಹಣವನ್ನು ತಗೊಳ್ಳಿ ಎಂದು ಬ್ಯಾಂಕುಗಳಿಗೆ ದುಂಬಾಲು ಬಿದ್ದಿದ್ದಾರೆ. ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧ ಗುರುವಾರ ಮೂರು ದಿನಗಳ ಬ್ರಿಟಿಷ್ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮದ್ಯ ಉದ್ಯಮಿ ವಿಜಯ್ ಮಲ್ಯ ಮತ್ತೊಮ್ಮೆ ಭಾರತೀಯ ಬ್ಯಾಂಕುಗಳಿಗೆ ನೀಡಬೇಕಿದ್ದ ಮೂಲ..
                 

ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ದರದಲ್ಲೂ ಏರಿಳಿತ

13 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಮತ್ತೆ ಏರಿಳಿತವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ 510 ರುಪಾಯಿ ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 38,200 ರುಪಾಯಿ ದಾಖಲಾಗಿದೆ. ಬೆಳ್ಳಿಯು ಬೆಲೆಯು ಹೆಚ್ಚು ಏರಿಳಿತಗೊಳ್ಳದೆ ಕೆಜಿಗೆ 49,000 ರುಪಾಯಿ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು..
                 

1 ಕೆಜಿ ಅಣಬೆಗೆ ಒಂದೂವರೆ ಲಕ್ಷ ರುಪಾಯಿ, 1 ಕೆಜಿ ಕಾಫಿ ಪುಡಿಗೆ 85,000 ರುಪಾಯಿ

13 days ago  
ಉದ್ಯಮ / GoodReturns/ Classroom  
ದೇಶದಲ್ಲಿ ದಿನೇ ದಿನೇ ಆಹಾರ ಧಾನ್ಯಗಳ ಬೆಲೆ ಏರುತ್ತಲೇ ಹೋಗುತ್ತಿದೆ. ಇದು ನಮ್ಮ ಜೇಬಿಗೆ ಸ್ವಲ್ಪ ಹೆಚ್ಚು ಭಾರವಾಗತೊಡಗಿದೆ. ಮಾರುಕಟ್ಟೆಗೆ ಏನನ್ನೇ ಖರೀದಿಸಲು ಹೋದರು ಬೆಲೆ ಏರಿಕೆ ಬಿಸಿ ತಟ್ಟುತ್ತೆ. ಕಳೆದ ಕೆಲವು ವಾರಗಳ ಹಿಂದೆ ಈರುಳ್ಳಿ ಬೆಲೆಯು ಜನಸಾಮಾನ್ಯರನ್ನು ಕಂಗೆಡೆಸಿದ್ದು ಮರೆಯುವ ಹಾಗಿಲ್ಲ. ಹೀಗೆ ನಾವು ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳೇ ದುಬಾರಿಯಾದರೆ ಜೀವನ ಮಾಡುವುದು..
                 

AGR ಪಾವತಿಗಾಗಿ ಹೊಸ ವೇಳಾಪಟ್ಟಿ ಮನವಿ ತಿರಸ್ಕರಿಸಿದ ಸುಪ್ರೀಂ: ವೊಡಾಫೋನ್ ಐಡಿಯಾ ಷೇರು ಭಾರೀ ಕುಸಿತ

13 days ago  
ಉದ್ಯಮ / GoodReturns/ Classroom  
ವೊಡಾಫೋನ್ ಐಡಿಯಾ ಕಂಪನಿಯು ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಪಾವತಿಗಳ ಹೊಸ ವೇಳಾಪಟ್ಟಿಯನ್ನು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ, ಕಂಪನಿಯ ಷೇರುಗಳು 14 ಪರ್ಸೆಂಟ್‌ನಷ್ಟು ಕುಸಿತ ಕಂಡಿವೆ ಟೆಲಿಕಾಂ ಕಂಪನಿಗಳು ಎಜಿಆರ್ ಬಾಕಿ ಹಣವನ್ನು ಮಾರ್ಚ್‌ 17, 2020 ರೊಳಗೆ ಪಾವತಿಸಬೇಕೆಂದು ಅಪೆಕ್ಸ್ ಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ..
                 

ಭಾರತದ 10 ಖ್ಯಾತ ಶ್ರೀಮಂತರು: ಯಾರಿಗೆ ಮೊದಲ ಸ್ಥಾನ?

14 days ago  
ಉದ್ಯಮ / GoodReturns/ Personal Finance  
ಶ್ರೀಮಂತಿಕೆಗೂ ಖ್ಯಾತಿಗೂ ಸಂಬಂಧ ಇದೆಯಾ? ಖ್ಯಾತಿ ಬರುತ್ತಿದ್ದಂತೆಯೇ ಶ್ರೀಮಂತಿಕೆ ಬರುತ್ತದೋ ಅಥವಾ ಶ್ರೀಮಂತಿಕೆಯನ್ನು ಹುಡುಕಿಕೊಂಡು ಖ್ಯಾತಿ ಬರುತ್ತದೋ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವುದು ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ. ನಾವು ಈ ಲೇಖನದಲ್ಲಿ ಹೇಳಲು ಹೊರಟಿರುವುದು ಮಾತ್ರ ಭಾರತದ ಹತ್ತು ಖ್ಯಾತ ಶ್ರೀಮಂತರ ಬಗ್ಗೆ. 2020ನೇ ಇಸವಿಯಲ್ಲಿ ಭಾರತದಲ್ಲಿ ಇವರು ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ..
                 

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಣ ಕಳಿಸಲು ಬೆಸ್ಟ್ ಟಿಪ್ಸ್

20 days ago  
ಉದ್ಯಮ / GoodReturns/ Personal Finance  
ಯಾರೇ ಪೋಷಕರಿರಲಿ ತಮ್ಮ ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುವುದು ಅತಿ ದೊಡ್ಡ ನಿರ್ಧಾರ. ಮಕ್ಕಳ ವಿದೇಶ ವಿದ್ಯಾಭ್ಯಾಸದ ಸಿದ್ಧತೆ ಕೂಡ ದೀರ್ಘವಾದ ಪ್ರಕ್ರಿಯೆ. ಯಾವ ಕೋರ್ಸ್, ಯಾವ ಯೂನಿವರ್ಸಿಟಿ, ಅರ್ಹತೆಯ ಮಾನದಂಡಗಳು, ಪ್ರವೇಶ ಪರೀಕ್ಷೆ, ಉಳಿದುಕೊಳ್ಳುವುದು ಎಲ್ಲಿ... ಇತ್ಯಾದಿ ವಿಚಾರಗಳನ್ನೆಲ್ಲ ತುಂಬ ಆಸ್ಥೆ ವಹಿಸಿ ನೋಡಿಕೊಳ್ಳಬೇಕಾಗುತ್ತದೆ. ಶೈಕ್ಷಣಿಕ ಸಾಲವೇನೋ ಸಿಗುತ್ತದೆ. ಆದರೆ ಅದೇನಿದ್ದರೂ ಯೂನಿವರ್ಸಿಟಿಯ ಟ್ಯೂಷನ್ ಫೀ..
                 

ಹೊಸ ಆದಾಯ ತೆರಿಗೆ ನಿಯಮದ ಇ ಕ್ಯಾಲ್ಕುಲೇಟರ್ ಬಿಡುಗಡೆ

21 days ago  
ಉದ್ಯಮ / GoodReturns/ Personal Finance  
ಆದಾಯ ತೆರಿಗೆ ಇಲಾಖೆಯಿಂದ ಇ ಕ್ಯಾಲ್ಕುಲೇಟರ್ ಆರಂಭಿಸಲಾಗಿದೆ. ಕೇಂದ್ರ ಬಜೆಟ್ ನ ಹೊಸ ಘೋಷಣೆ ಪ್ರಕಾರ, ಯಾವುದೇ ತೆರಿಗೆ ವಿನಾಯ್ತಿ ಅಥವಾ ಕಡಿತಕ್ಕೆ ಕ್ಲೇಮ್ ಮಾಡದೆ, ಹೊಸ ತೆರಿಗೆ ಸ್ಲ್ಯಾಬ್ ಅನ್ವಯ ಐಟಿಆರ್ ಫೈಲ್ ಮಾಡುತ್ತೇವೆ ಅನ್ನೋದಾದರೆ ಅಂದಾಜು ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎಂಬುದನ್ನು ಈ ಮೂಲಕ ತಿಳಿಯಬಹುದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಹಳೆ ಹಾಗೂ..
                 

ಪಿಪಿಎಫ್ ಹಾಗೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ ಸಾಧ್ಯತೆ

24 days ago  
ಉದ್ಯಮ / GoodReturns/ Personal Finance  
ಮುಂಬರುವ ದಿನಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ಹಾಗೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸಣ್ಣ ಉಳಿತಾಯ ದರಗಳಲ್ಲಿ ಸ್ವಲ್ಪ ಮಿತವಾಗಿರಬಹುದು ಎಂಬ ಸುಳಿವನ್ನು ನೀಡಿದ್ದಾರೆ. ಜನವರಿಯಿಂದ ಮಾರ್ಚ್‌ವರೆಗೆ ಈ ತ್ರೈಮಾಸಿಕದಲ್ಲಿ ಬ್ಯಾಂಕ್ ಠೇವಣಿಗಳನ್ನು ಮಧ್ಯಮಗೊಳಿಸಿದರೂ, ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ..
                 

ಕೇಂದ್ರ ಬಜೆಟ್ 2020: ಆದಾಯ ತೆರಿಗೆಯಲ್ಲಿನ ಬದಲಾವಣೆಯ ಸಂಪೂರ್ಣ ಮಾಹಿತಿ

26 days ago  
ಉದ್ಯಮ / GoodReturns/ Personal Finance  
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ನೇರ ತೆರಿಗೆ ದರಗಳಲ್ಲಿ ಏನೆಲ್ಲಾ ಬದಲಾವಣೆ ತರಲಿದ್ದಾರೆ ಎಂದು ಇಡೀ ಭಾರತವೇ ಎದುರು ನೋಡುತ್ತಿತ್ತು. ಅದರಲ್ಲೂ ತೆರಿಗೆದಾರರು ಅಂದುಕೊಂಡಂತೆ ಈ ಬಾರಿ ಭರ್ಜರಿ ಕೊಡುಗೆಯನ್ನೇ ನೀಡಿದ್ದಾರೆ. ಆದಾಯ ತೆರಿಗೆ ದರಗಳಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಪ್ರಸ್ತುತ ಇರುವ ಆದಾಯ ತೆರಿಗೆ ದರಗಳನ್ನು ಬದಲಾಯಿಸಿದ್ದು, ಎಷ್ಟು ಆದಾಯಕ್ಕೆ ಎಷ್ಟು ತೆರಿಗೆ ವಿಧಿಸಲಾಗಿದೆ..
                 

ಪ್ರಪಂಚ ಸುತ್ತೋ ಕ್ರೇಜ್ ಇದ್ರೆ, ಕಿಸೆಯಲ್ಲೊಂದು ಟ್ರಾವೆಲ್ ಕಾರ್ಡ್ ಇರ್ಲಿ

one month ago  
ಉದ್ಯಮ / GoodReturns/ Personal Finance  
ಪ್ರವಾಸ ಕೈಗೊಳ್ಳುವ ಕ್ರೇಜ್ ಯಾರಿಗಿರಲ್ಲ ಹೇಳಿ. ಆದರೆ ವಿದೇಶಿ ಪ್ರಯಾಣಕ್ಕೂ ಮುನ್ನ ಒಂದಿಷ್ಟು ಯೋಜನೆ, ಆರ್ಥಿಕ ಸ್ಥಿತಿ ಗತಿ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಪ್ರವಾಸಕ್ಕೂ ಮುನ್ನ ಕಿಸೆಯಲ್ಲಿ ಎಷ್ಟು ದುಡ್ಡು ಇಟ್ಟುಕೊಂಡಿರಬೇಕು ಎಂಬುದು ಮೊದಲಿಗೆ ಹೊಳೆಯುವ ಆಲೋಚನೆ. ಟಿಕೆಟ್ ಬುಕ್ಕಿಂಗ್, ಕೂಪನ್, ಕ್ಯಾಶ್ ಬ್ಯಾಕ್, ರಿಯಾಯಿತಿ ಎಲ್ಲವೂ ಗಣನೆಗೆ ಬರಲಿದೆ. ಈ ಮೂಲಕ ಎಷ್ಟು ಸಾಧ್ಯವೂ..
                 

ಕೇಂದ್ರ ಬಜೆಟ್ 2020: ಷೇರು ಮಾರುಕಟ್ಟೆ ಹೂಡಿಕೆದಾರರ ನಿರೀಕ್ಷೆಗಳೇನು?

one month ago  
ಉದ್ಯಮ / GoodReturns/ Personal Finance  
ಇನ್ನೇನು ಕೇಂದ್ರ ಬಜೆಟ್ ಗೆ ವಾರವೂ ಇಲ್ಲ. ಷೇರು ಮಾರುಕಟ್ಟೆ ದೃಷ್ಟಿಯಿಂದಲೂ ಕೇಂದ್ರ ಬಜೆಟ್ ಬಹಳ ಮುಖ್ಯವಾದದ್ದು. ಷೇರು ಮಾರುಕಟ್ಟೆ ಹೂಡಿಕೆದಾರರು ಕೇಂದ್ರ ಬಜೆಟ್ ನಿಂದ ಏನನ್ನು ನಿರೀಕ್ಷೆ ಮಾಡುತ್ತಾರೆ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ. ಆರ್ಥಿಕವಾಗಿ ದೇಶವು ಸಂಕಷ್ಟದಲ್ಲಿ ಇದ್ದರೂ ಷೇರು ಮಾರುಕಟ್ಟೆ ಸದ್ಯಕ್ಕಂತೂ ಹೂಡಿಕೆದಾರರಿಗೆ ಉತ್ತರ ರಿಟರ್ನ್ಸ್ ನೀಡುತ್ತಿದೆ. ಅದಕ್ಕೆ ಕಾರಣ ಏನೆಂದರೆ,..
                 

ಭಾರತದ ಡಿಜಿಟಲ್ ವ್ಯವಹಾರದಲ್ಲಿ ಬೆಂಗಳೂರು ನಂಬರ್ 1 : 20 ಲಕ್ಷ ಕೋಟಿ ಟ್ರಾನ್ಸಾಕ್ಷನ್

8 hours ago  
ಉದ್ಯಮ / GoodReturns/ Classroom  
                 

ಸ್ಕೋಡಾದ ಲಿಮಿಟೆಡ್ ಎಡಿಶನ್ ಕಾರು ಆಕ್ಟೇವಿಯಾ RS 245 ಬಿಡುಗಡೆ

12 hours ago  
ಉದ್ಯಮ / GoodReturns/ Classroom  
                 

ತಾವಾಗಿಯೇ ಪರೀಕ್ಷೆಗೆ ಬಂದು ಕೊರೊನಾ ದೃಢಪಟ್ಟರೆ 1 ಲಕ್ಷ ನಗದು

16 hours ago  
ಉದ್ಯಮ / GoodReturns/ Classroom  
ಚೀನಾದ ಹುಬೈ ಪ್ರಾಂತ್ಯದಲ್ಲಿ ಯಾರಾದರೂ ತಮಗಿರುವ ಕೊರೊನಾ ರೋಗ ಲಕ್ಷಣಗಳನ್ನು ಗಮನಕ್ಕೆ ತಂದು, ಅವರಿಗೆ ಆ ಸೋಂಕು ತಗುಲಿರುವುದು ಕೂಡ ಸಾಬೀತಾದಲ್ಲಿ 10,000 ಯುವಾನ್ (ಭಾರತೀಯ ರುಪಾಯಿಗಳಲ್ಲಿ 1,02,048) ನೀಡಲಿದೆ. ಕೊರೊನಾ ವೈರಾಣು ದಾಳಿಗೆ ಚೀನಾ ಅದ್ಯಾವ ಪರಿ ತಲೆ ಕೆಡಿಸಿಕೊಂಡಿದೆ ಎಂಬುದು ಈ ಘೋಷಣೆಯಿಂದಲೇ ತಿಳಿಯುತ್ತದೆ. ವುಹಾನ್ ನಿಂದ ನೂರೈವತ್ತು ಕಿ.ಮೀ. ದೂರದಲ್ಲಿ ಇರುವ ಕಿಯಾನ್..
                 

2,000 ರು. ಮುಖಬೆಲೆಯ ನೋಟಿನ ಬಗ್ಗೆ ಮಾತಾಡಿದ ಸಚಿವೆ ನಿರ್ಮಲಾ

19 hours ago  
ಉದ್ಯಮ / GoodReturns/ Classroom  
2,000 ರುಪಾಯಿ ಮುಖಬೆಲೆಯ ನೋಟು ವಿತರಣೆ ನಿಲ್ಲಿಸುವಂತೆ ಯಾವುದೇ ಸೂಚನೆಯನ್ನು ಬ್ಯಾಂಕ್ ಗಳಿಗೆ ನೀಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ. "ಈ ವರೆಗೆ ನನಗೆ ಗೊತ್ತಿರುವಂತೆ, 2,000 ರುಪಾಯಿ ಮುಖಬೆಲೆಯ ನೋಟು ವಿತರಣೆ ನಿಲ್ಲಿಸುವಂತೆ ಯಾವುದೇ ಸೂಚನೆಯನ್ನು ಬ್ಯಾಂಕ್ ಗಳಿಗೆ ನೀಡಿಲ್ಲ" ಎಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಮುಖ್ಯಸ್ಥರ ಸಭೆಯಲ್ಲಿ..
                 

2019ರಲ್ಲಿ ಮುಕೇಶ್ ಅಂಬಾನಿ ಪ್ರತಿ ಗಂಟೆಗೆ ಗಳಿಸಿದ್ದು 7 ಕೋಟಿ ರುಪಾಯಿ

yesterday  
ಉದ್ಯಮ / GoodReturns/ Classroom  
ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 2019ರಲ್ಲಿ ಪ್ರತಿ ಗಂಟೆಗೆ 7 ಕೋಟಿ ರುಪಾಯಿ ಆದಾಯ ಗಳಿಸಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಪ್ರತಿ ತಿಂಗಳು ಮೂವರು ಶತಕೋಟ್ಯಧಿಪತಿಗಳನ್ನು ಸೇರ್ಪಡೆಯಾಗಿದ್ದು, ಇದೀಗ ಆ ಸಂಖ್ಯೆಯು 138ಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಲಿಸ್ಟ್‌ನಲ್ಲಿ ಭಾರತವು ಮೂರನೇ ಸ್ಥಾನದಲ್ಲಿದ್ದು, ಚೀನಾ ಮತ್ತು..
                 

ದ್ವಿಚಕ್ರ ವಾಹನಗಳಿಗೆ ಟಾಪ್ 5 ಇನ್ಷೂರೆನ್ಸ್‌ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

yesterday  
ಉದ್ಯಮ / GoodReturns/ Personal Finance  
ಇನ್ಷ್ಯೂರೆನ್ಸ್ ಅನ್ನುವುದು ಭಾರತದಲ್ಲಿ ದಶಕಗಳ ಹಿಂದೆ ಪ್ರಾರಂಭವಾದಾಗಿನಿಂದ ದೊಡ್ಡ ಪರಿವರ್ತನೆಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿದರೆ ಉತ್ತಮವಾಗಿದೆ. ಜೊತೆಗೆ ತಮ್ಮ ವಾಹನಗಳಿಗೂ ಇನ್ಷ್ಯೂರೆನ್ಸ್ ಮಾಡಿಸುವುದು ಹೆಚ್ಚು ಕಡಿಮೆ ಅನಿವಾರ್ಯವಾಗಿಬಿಟ್ಟಿದೆ. ಭಾರತದಲ್ಲಿ ಹೆಚ್ಚಿನ ಮನೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ನಾಲ್ಕು ಚಕ್ರಗಳ ವಾಹಗಳು ಇವೆ. ವಾಹನಗಳ ಮೇಲೆ ಮನುಷ್ಯನ ಅವಲಂಭನೆ ಹೆಚ್ಚಾದಂತೆ ಅದರ ಬಳಕೆಯ ಪ್ರಮಾಣ, ಖರೀದಿ..
                 

ದ್ವಿಚಕ್ರ ವಾಹನಗಳಿಗೆ ಟಾಪ್ 5 ಇನ್ಷ್ಯೂರೆನ್ಸ್‌ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

yesterday  
ಉದ್ಯಮ / GoodReturns/ Personal Finance  
ಇನ್ಷ್ಯೂರೆನ್ಸ್ ಅನ್ನುವುದು ಭಾರತದಲ್ಲಿ ದಶಕಗಳ ಹಿಂದೆ ಪ್ರಾರಂಭವಾದಾಗಿನಿಂದ ದೊಡ್ಡ ಪರಿವರ್ತನೆಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿದರೆ ಉತ್ತಮವಾಗಿದೆ. ಜೊತೆಗೆ ತಮ್ಮ ವಾಹನಗಳಿಗೂ ಇನ್ಷ್ಯೂರೆನ್ಸ್ ಮಾಡಿಸುವುದು ಹೆಚ್ಚು ಕಡಿಮೆ ಅನಿವಾರ್ಯವಾಗಿಬಿಟ್ಟಿದೆ. ಭಾರತದಲ್ಲಿ ಹೆಚ್ಚಿನ ಮನೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ನಾಲ್ಕು ಚಕ್ರಗಳ ವಾಹಗಳು ಇವೆ. ವಾಹನಗಳ ಮೇಲೆ ಮನುಷ್ಯನ ಅವಲಂಭನೆ ಹೆಚ್ಚಾದಂತೆ ಅದರ ಬಳಕೆಯ ಪ್ರಮಾಣ, ಖರೀದಿ..
                 

ಷೇರು ಮಾರುಕಟ್ಟೆಯಲ್ಲಿ 4 ದಿನದಲ್ಲಿ ಕರಗಿದ 5 ಲಕ್ಷ ಕೋಟಿ ಸಂಪತ್ತು

yesterday  
ಉದ್ಯಮ / GoodReturns/ Classroom  
ಭಾರತದ ಷೇರು ಮಾರುಕಟ್ಟೆ ಒತ್ತಡದಲ್ಲಿದ್ದು, ಸತತ ನಾಲ್ಕನೇ ದಿನವಾದ ಬುಧವಾರ ಕೂಡ ಇಳಿಕೆ ದಾಖಲಿಸಿದೆ. ಜಾಗತಿಕ ಮಟ್ಟದಲ್ಲಿ ಈಕ್ವಿಟಿ ಮಾರ್ಕೆಟ್ ಸಾಗುತ್ತಿರುವ ಹಾದಿಯನ್ನೇ ಭಾರತವೂ ಅನುಸರಿಸುತ್ತಿದೆ. ಬುಧವಾರದಂದು ಬೆಳಗ್ಗೆ ಸೆಷನ್ ನಲ್ಲಿ ಸೆನ್ಸೆಕ್ಸ್ 400 ಪಾಯಿಂಟ್ ಗಳ ಕುಸಿತ ಕಂಡಿತು. 40 ಸಾವಿರ ಪಾಯಿಂಟ್ ಗಳಿಂದ ಕೆಳಗೆ ಇಳಿಯಿತು. ಕೇವಲ ನಾಲ್ಕು ದಿನದಲ್ಲಿ ಸೆನ್ಸೆಕ್ಸ್ ಸೂಚ್ಯಂಕ 1400..
                 

ಕೊರೊನಾದಿಂದ ಜಾಗತಿಕ ಜಿಡಿಪಿ 71 ಲಕ್ಷ ಕೋಟಿ ಕೊಚ್ಚಿಹೋದ ಅಂದಾಜು

yesterday  
ಉದ್ಯಮ / GoodReturns/ Classroom  
                 

ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಕೆಜಿಗೆ 1,500 ರುಪಾಯಿ ಕಡಿಮೆ

2 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ಇಳಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 150 ರುಪಾಯಿ ಇಳಿಕೆಗೊಂಡು 40,150 ರುಪಾಯಿಗೆ ಮುಟ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 750 ರುಪಾಯಿ ದರ ತಗ್ಗಿದೆ. ಬೆಳ್ಳಿಯು ಕೆಜಿಗೆ ಒಂದೂವರೆ ಸಾವಿರ ರುಪಾಯಿ..
                 

ಹೊಸ ರೈಲಿನಲ್ಲಿ ಟಾಯ್ಲೆಟ್ ಸೀಟ್ ಕೂಡ ಬಿಡದಂತೆ ಕದ್ದೊಯ್ದ ಪ್ರಯಾಣಿಕರು

2 days ago  
ಉದ್ಯಮ / GoodReturns/ Classroom  
ದೂರದ ಸ್ಥಳಗಳಿಗೆ ತೆರಳುವ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗಲೆಂದು ರೈಲ್ವೆ ಇಲಾಖೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಿತ್ತು. ಸ್ವಚ್ಛತೆಯ ಜೊತೆಗೆ ಉತ್ತಮ ಸೇವೆ ನೀಡಲು ಪ್ರಾಜೆಕ್ಟ್‌ ಉತ್ಕ್ರಿಷ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ ಪ್ರಯಾಣಿಕರೇ ಕಳ್ಳರಾದ್ರೆ ರೈಲ್ವೆ ಇಲಾಖೆ ಏನು ಸೌಲಭ್ಯ ಕೊಡಬಹುದು ಹೇಳಿ. ಹೊಸ ರೈಲುಗಳಲ್ಲಿನ ವಾಶ್‌ರೂಮ್‌ಗಳಲ್ಲಿ ನಲ್ಲಿಗಳು, ಟಾಯ್ಲೆಟ್ ಪೇಪರ್, ಕನ್ನಡಿಗಳು ಕಾಣೆಯಾಗಿವೆ. ಈ ಮೂಲಕ ಸಾರ್ವಜನಿಕ ಸೇವೆ ದುರುಪಯೋಗವನ್ನು ಇದು ಪ್ರತಿಬಿಂಬಿಸುತ್ತದೆ...
                 

ಎಸ್ ಬಿಐ ಕಾರ್ಡ್ಸ್ ಐಪಿಒಗೆ 750ರಿಂದ 755 ರುಪಾಯಿ ದರ ನಿಗದಿ

2 days ago  
ಉದ್ಯಮ / GoodReturns/ Classroom  
                 

ರಿಲಯನ್ಸ್ ಜಿಯೋದಿಂದ ಗ್ರಾಹಕರಿಗೆ ಶಾಕ್! ರೀಚಾರ್ಜ್ ಗೆ ಮುನ್ನ ಗಮನಿಸಿ

2 days ago  
ಉದ್ಯಮ / GoodReturns/ Classroom  
                 

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮುಂದಿನ 'ಗೇಮ್‌' ಪ್ಲಾನ್ ಏನ್ ಗೊತ್ತಾ?

3 days ago  
ಉದ್ಯಮ / GoodReturns/ Classroom  
ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕಾಲಿಡದ ಕ್ಷೇತ್ರವೇ ಬಹಳ ವಿರಳವಾಗಿಬಿಟ್ಟಿವೆ. ಉದ್ಯಮ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆದಿರುವ ಮುಕೇಶ್ ಮುಂದಿನ ಗೇಮ್‌ ಪ್ಲಾನ್ ಯಾವುದು ಎಂದು ಸುಳಿವು ನೀಡಿದ್ದಾರೆ. ಮುಂಬೈನಲ್ಲಿ ನಡೆದ ಫ್ಯೂಚರ್ ಡೀಕೋಡೆಡ್ ಸಿಇಒ 2020'' ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅಂಬಾನಿ ಭವಿಷ್ಯದಲ್ಲಿ ಗೇಮಿಂಗ್..
                 

ಮತ್ತಷ್ಟು ದುಬಾರಿಯಾದ ಆಭರಣದ ಚಿನ್ನ, ಬೆಳ್ಳಿ ಕೆಜಿಗೆ 500 ರುಪಾಯಿ ಹೆಚ್ಚಳ

3 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಅತ್ಯಂತ ದುಬಾರಿಯಾಗಿದೆ. ಹಳದಿ ಲೋಹದ ಬೆಲೆಯು ಏರಿಕೆಯತ್ತಲೇ ಸಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 290 ರುಪಾಯಿ ಏರಿದ್ದು 40,300 ರುಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 500 ರುಪಾಯಿ ಏರಿಕೆಯಾಗಿ 51,500 ರುಪಾಯಿ ಗಡಿ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು..
                 

ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ: ಹೂಡಿಕೆದಾರರ 3 ಲಕ್ಷ ಕೋಟಿ ಖಲ್ಲಾಸ್

3 days ago  
ಉದ್ಯಮ / GoodReturns/ Classroom  
ಕೊರೊನಾವೈರಸ್ ಆತಂಕ ಸೋಮವಾರ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಸೆನ್ಸೆಕ್ಸ್ 806 ಪಾಯಿಂಟ್ಸ್‌ ಇಳಿಕೆ ಕಂಡಿದ್ದು, ನಿಫ್ಟಿ 251.45 ಪಾಯಿಂಟ್ಸ್‌ ಕುಸಿತಕ್ಕೆ ಒಳಗಾಗಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಸೋಮವಾರ ಆರಂಭದಿಂದಲೇ ಕುಸಿತದ ಹಾದಿ ಹಿಡಿಯಿತು. 12,080 ಅಂಶಗಳಿಗೆ ಕೊನೆಗೊಂಡಿದ್ದ ಎನ್‌ಎಸ್‌ಇ 251.45 ಅಂಶಗಳು ಇಳಿಕೆ ಸಾಧಿಸಿ 11,829.40ಗೆ ಅಂಶಗಳಿಗೆ ತಲುಪಿದೆ. ಇನ್ನು ಸೆನ್ಸೆಕ್ಸ್ 806 ಅಂಶಗಳು..
                 

ಮಾರುತಿ ವಿಟಾರಾ ಬ್ರೆಜಾ ಪೆಟ್ರೋಲ್ ಎಂಜಿನ್ ಕಾರು ರು. 7.34 ಲಕ್ಷ

3 days ago  
ಉದ್ಯಮ / GoodReturns/ Classroom  
                 

ಪತರಗುಟ್ಟಿದ ಷೇರು ಮಾರುಕಟ್ಟೆ; ಕರಗಿದ ಹೂಡಿಕೆದಾರರ ಸಂಪತ್ತು

3 days ago  
ಉದ್ಯಮ / GoodReturns/ Classroom  
                 

ಗಗನಕ್ಕೇರಿದ ಚಿನ್ನದ ದರ, ಇಂದಿನ ಬೆಲೆ ಎಷ್ಟು ಗೊತ್ತಾ?

4 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಏರಿಳಿತದಲ್ಲೇ ಸಾಗಿದ್ದು, ಸತತವಾಗಿ ಚಿನ್ನದ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 41,500 ರುಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನ 10ಗ್ರಾಂಗೆ 42,510 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 51,000 ರುಪಾಯಿ ಗಡಿ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌..
                 

ಒಂದು ವಾರದಲ್ಲಿ ದೇಶದ ಟಾಪ್ 6 ಕಂಪನಿಗಳಿಗೆ 29,487 ಕೋಟಿ ರುಪಾಯಿ ನಷ್ಟ

4 days ago  
ಉದ್ಯಮ / GoodReturns/ Classroom  
ಕಳೆದ ಒಂದು ವಾರದಲ್ಲಿ ಭಾರತೀಯ ಕಂಪನಿಗಳಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್‌, ಕೋಟಕ್ ಮಹೀಂದ್ರಾ ಬ್ಯಾಂಕ್‌ ಸೇರಿದಂತೆ ಟಾಪ್ 10 ಕಂಪನಿಗಳಲ್ಲಿ 6 ಕಂಪನಿಗಳು 29,487 ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಕಳೆದುಕೊಂಡಿವೆ. ದೇಶದಲ್ಲಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿರುವ ಟಾಪ್ 10 ದೇಶೀಯ ಸಂಸ್ಥೆಗಳಲ್ಲಿ ಆರು ಕಂಪನಿಗಳು ಮೌಲ್ಯಮಾಪನದಲ್ಲಿ, 29,487 ಕೋಟಿಗಳ ನಷ್ಟ..
                 

ಪ್ರಧಾನಮಂತ್ರಿ- ಕಿಸಾನ್ ಯೋಜನೆ: ವರ್ಷದಲ್ಲಿ 50,850 ಕೋಟಿ ಬಿಡುಗಡೆ

5 days ago  
ಉದ್ಯಮ / GoodReturns/ Classroom  
ಪ್ರಧಾನಮಂತ್ರಿ- ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಈ ತನಕ 50,850 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಕೃಷಿ ಸಚಿವಾಲಯವು ಈ ಯೋಜನೆ ಅಡಿ ಆಗಿರುವ ಪ್ರಗತಿಯನ್ನು ಹಂಚಿಕೊಂಡಿದೆ. ಫೆಬ್ರವರಿ 24ಕ್ಕೆ ಪ್ರಧಾನಮಂತ್ರಿ- ಕಿಸಾನ್ ಯೋಜನೆ ಜಾರಿಯಾಗಿ ಒಂದು ವರ್ಷ ಸಂಪೂರ್ಣವಾಗುವ ಹಿನ್ನೆಲೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಕಳೆದ ವರ್ಷ ಫೆಬ್ರವರಿ..
                 

ಸ್ವಚ್ಛ ಭಾರತ್ ಅಭಿಯಾನಕ್ಕೆ ಕೋಟಿ ಕೋಟಿ ಕೊಟ್ಟ ಆ ಮೂರು ಸಂಸ್ಥೆ ಯಾವುದು?

5 days ago  
ಉದ್ಯಮ / GoodReturns/ Classroom  
                 

ಭಾರತದ ಈ ರಾಜ್ಯದಲ್ಲಿ 12 ಲಕ್ಷ ಕೋಟಿ ರುಪಾಯಿ ಮೌಲ್ಯದ ಚಿನ್ನದ ಗಣಿ ಪತ್ತೆ

6 days ago  
ಉದ್ಯಮ / GoodReturns/ Classroom  
                 

ಚಿನ್ನದ ದರ 7 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ; 22 ಕ್ಯಾರಟ್ ಗೆ 40,350

6 days ago  
ಉದ್ಯಮ / GoodReturns/ Classroom  
ಚಿನ್ನದ ಬೆಲೆಯು ಏಳು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೊರೊನಾ ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆತಂಕದ ಕಾರಣಕ್ಕೆ ಚಿನ್ನದ ಬೆಲೆ ಏರಿದೆ. ಕೊರೊನಾ ವೈರಾಣುವಿನಿಂದ ಆಗುವ ಆರ್ಥಿಕ ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಚೀನಾ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ ಮೆಚ್ಚಿನ ಹೂಡಿಕೆಯಾದ ಚಿನ್ನದ ಮೇಲೇ ಹೂಡಿಕೆದಾರರು ಹಣ ತೊಡಗಿಸುತ್ತಿದ್ದಾರೆ. ಯು.ಎಸ್. ಗೋಲ್ಡ್ ಫ್ಯೂಚರ್ಸ್ ಶುಕ್ರವಾರ- ಭಾರತೀಯ ಕಾಲಮಾನ..
                 

ಹಂದಿಜ್ವರದ ಭೀತಿ; ಮನೆಯಿಂದಲೇ ಕೆಲಸ ಮಾಡುವಂತೆ SAP ಸೂಚನೆ

6 days ago  
ಉದ್ಯಮ / GoodReturns/ Classroom  
ಜರ್ಮನ್ ತಂತ್ರಜ್ಞಾನ ಕಂಪೆನಿ SAP ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ಫೆಬ್ರವರಿ 20ರಿಂದ 28ನೇ ತಾರೀಕು ಮನೆಗಳಿಂದಲೇ ಕಾರ್ಯ ನಿರ್ವಹಿಸುವಂತೆ ಸಲಹೆ ಮಾಡಿದೆ. ಉತ್ತರ ಬೆಂಗಳೂರಿನ ಎಕೋವರ್ಲ್ಡ್ ಕಚೇರಿಯಲ್ಲಿ H1N1 (ಹಂದಿಜ್ವರ) ಪ್ರಕರಣಗಳು ಕೆಲವು ಕಂಡುಬಂದಿದ್ದರಿಂದ ಈ ಸಲಹೆ ನೀಡಲಾಗಿದೆ. "ನಮ್ಮ ಸಿಬ್ಬಂದಿಯ ಆರೋಗ್ಯ ನಮಗೆ ಆದ್ಯತೆ. ಇದು ತುಂಬ ಗಂಭೀರ ವಿಚಾರವಾದ್ದರಿಂದ H1N1 ವೈರಾಣು ಹರಡದಂತೆ ತಡೆಯಲು..
                 

ಈತನ ಒಂದು ಟ್ವೀಟ್ ಗೆ 6.16 ಕೋಟಿ ರುಪಾಯಿ ಸಂಪಾದನೆ; ಯಾರೀತ?

7 days ago  
ಉದ್ಯಮ / GoodReturns/ Classroom  
                 

ಬುಲೆಟ್ ಬಿದ್ರೂ ಏನಾಗಲ್ಲಾ, ಬಾಂಬ್ ಬಿದ್ರೂ ಮಿಸುಕಾಡಲ್ಲ! ಇದು ಟ್ರಂಪ್ 'ದಿ ಬೀಸ್ಟ್‌'

7 days ago  
ಉದ್ಯಮ / GoodReturns/ Classroom  
ಅಮೆರಿಕಾ ಅಧ್ಯಕ್ಷ ಅಂದಕೂಡಲೇ ಅದರ ಗತ್ತು ಬೇರೆ ರೀತಿಯಲ್ಲೇ ಇರುತ್ತದೆ. ವಿಶ್ವದ ಯಾವೊಬ್ಬ ಪ್ರಧಾನಿಗೂ ಇರದ ಸೆಕ್ಯುರಿಟಿ ಅವರಿಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್ ಫೆಬ್ರವರಿ 24, 25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಅವರ ಭದ್ರತೆಗಾಗಿಯೇ ಭಾರತ ಸರ್ಕಾರವು ಭಾರೀ ಮುತುವರ್ಜಿ ವಹಿಸುತ್ತಿದ್ದು, ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದೆ. ಅಮೆರಿಕಾ ಅಧ್ಯಕ್ಷ ಎಲ್ಲಿಗೇ..
                 

ಗೃಹ ಸಾಲ ಪಡೆಯಬೇಕೆ? ನೀವು ಎಷ್ಟು ಭರಿಸಬಹುದು ಎಂದು ಇಲ್ಲಿ ತಿಳಿದುಕೊಳ್ಳಿ

7 days ago  
ಉದ್ಯಮ / GoodReturns/ Personal Finance  
ಸ್ವಂತ ಮನೆ ಇರಬೇಕು ಎಂದು ಹಲವರ ಬಯಕೆ ಆಗಿರುತ್ತದೆ. ತನ್ನದೇ ಆದ, ಸಾಮರ್ಥ್ಯಕ್ಕೆ ಅನುಗುಣವಾದ, ಕನಸಿನ ಮನೆಯ ನಿರ್ಮಾಣವು ಜೀವನದ ಮಹತ್ವದ ಗುರಿಯಾಗಿರುತ್ತದೆ. ಆದರೆ ಸ್ವಂತ ಮನೆ ನಿರ್ಮಾಣವು ಅಷ್ಟು ಸುಲಭವಾಗಿರುವುದಿಲ್ಲ. ಶ್ರೀಮಂತರ ಮನೆ ನಿರ್ಮಾಣದ ಕನಸು ಹೇಗೋ ಆಗಿಬಿಡುತ್ತದೆ. ಆದರೆ ಬಡವರು, ಮಧ್ಯಮ ವರ್ಗದವರು ಮನೆ ನಿರ್ಮಾಣ ಮಾಡುವುದು ಜೀವಮಾನದ ಸಾಧನೆಯಾಗಿರುತ್ತದೆ. ಹೀಗಿರುವಾಗ ಸ್ವಂತ ಮನೆ..