One India

ಕರ್ಫ್ಯೂ ಕ್ಯಾನ್ಸಲ್: ಭಾನುವಾರ ಸಂಚಾರ ನಡೆಸಲಿವೆ 3500 KSRTC ಬಸ್ ಗಳು

39 minutes ago  
ಸುದ್ದಿ / One India/ News  
ಬೆಂಗಳೂರು, ಮೇ 30: ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಸಂಡೇ ಕರ್ಫ್ಯೂವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಹೀಗಾಗಿ, ಮೇ 31 ಭಾನುವಾರ ಕರ್ನಾಟಕದಲ್ಲಿ ಕರ್ಫ್ಯೂ ಇರುವುದಿಲ್ಲ. ದೈನಂದಿನ ಚಟುವಟಿಕೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ರಾಜ್ಯ ಸರ್ಕಾರ ಕರ್ಫ್ಯೂ ಕೈಬಿಟ್ಟ ಕಾರಣ, ಭಾನುವಾರ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಕೂಡ ಸಂಚಾರ ನಡೆಸಲಿವೆ...
                 

ಭಾನುವಾರ ಕರ್ಫ್ಯೂ ಇಲ್ಲ: ಬೆಳಗ್ಗೆ 7 ರಿಂದ ಸಂಜೆ 7 ರವರಿಗೆ ಮಾತ್ರ ವಿನಾಯಿತಿ.!

an hour ago  
ಸುದ್ದಿ / One India/ News  
ಬೆಂಗಳೂರು, ಮೇ 30: ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಮೇ 31 ರವರೆಗೂ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ 4.0 ಅನ್ವಯ ಕರ್ನಾಟಕದಲ್ಲಿ ಭಾನುವಾರದಂದು ಕಂಪ್ಲೀಟ್ ಲಾಕ್ ಡೌನ್ ಅಥವಾ ಕರ್ಫೂ ಇರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಘೋಷಿಸಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶದಂತೆ ಕಳೆದ ಭಾನುವಾರ ಕರ್ನಾಟಕದಲ್ಲಿ..
                 

Big Breaking: ಮೇ 31, ಭಾನುವಾರ ಕರ್ಫ್ಯು ಇರುವುದಿಲ್ಲ: ಸರ್ಕಾರದಿಂದ ಮಹತ್ವದ ನಿರ್ಧಾರ!

3 hours ago  
ಸುದ್ದಿ / One India/ News  
ಬೆಂಗಳೂರು, ಮೇ 30: ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಮೇ 31 ರವರೆಗೂ ನಾಲ್ಕನೇ ಹಂತದ ಲಾಕ್ ಡೌನ್ ಚಾಲ್ತಿಯಲ್ಲಿರಲಿದೆ. ಲಾಕ್ ಡೌನ್ 4.0 ಅನ್ವಯ ಕರ್ನಾಟಕದಲ್ಲಿ ಕೆಲವು ನಿಯಮಗಳು ಸಡಿಲಗೊಂಡಿದ್ದು, ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ ಡೌನ್ ಇರಲಿದೆ ಎಂದು ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು. ಅದರಂತೆ..
                 

ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಸಾರಾಂಶ

4 hours ago  
ಸುದ್ದಿ / One India/ News  
ನವದೆಹಲಿ, ಮೇ 30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ. ಇದೇ ಸಂದರ್ಭದಲ್ಲಿ ದೇಶದ ಜನತೆಯನ್ನುದ್ದೇಶಿ ಮೋದಿ ಪತ್ರ ಬರೆದಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ದೇಶಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ದೊರಕಿಸಿಕೊಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ತಮ್ಮ..
                 

ಕೋವಿಡ್ - 19 ಪರೀಕ್ಷೆ; ಕರ್ನಾಟಕದಿಂದ ಮಹತ್ವದ ಆದೇಶ

16 hours ago  
ಸುದ್ದಿ / One India/ News  
ಬೆಂಗಳೂರು, ಮೇ 29 : ಕೋವಿಡ್ - 19 ಪರೀಕ್ಷೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಹೊರ ರಾಜ್ಯ ಅಥವ ದೇಶದಿಂದ ಬರುವ ಪ್ರಯಾಣಿಕರು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಇದಕ್ಕೆ 650 ರೂ. ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಅಂತರಾಷ್ಟ್ರೀಯ, ಅಂತರ ರಾಜ್ಯ ಪ್ರಯಾಣಿಕರು ಕರ್ನಾಟಕಕ್ಕೆ ವಿಮಾನ ಅಥವ ರೈಲಿನಲ್ಲಿ ಆಗಮಿಸಿದಾಗ..
                 

ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!

19 hours ago  
ಸುದ್ದಿ / One India/ News  
ಬೆಂಗಳೂರು, ಮೇ 29: ಕೊರೊನಾವೈರಸ್ ಸಂಕಷ್ಟದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿ ಬೇಗುದಿ ಈಗ ರಾಜ್ಯಸಭಾ ಚುನಾವಣೆ ನೆಪದಲ್ಲಿ ಸ್ಫೋಟವಾಗಿದೆ. ಹಿಂದೆ ಮೈತ್ರಿ ಸರ್ಕಾರ ಪತನವಾಗಲು ಕಾರಣವಾಗಿದ್ದ ಬೆಳಗಾವಿ ಜಿಲ್ಲೆಯ ನಾಯಕರೇ ಮುಂಚೂಣಿಯಲ್ಲಿದ್ದಾರೆ. ಊಟ ಮಾಡುವ ನೆಪದಲ್ಲಿ ಒಂದೆಡೆ ಸೇರಿದ್ದ ಬಿಜೆಪಿಯ ಹಿರಿಯ ನಾಯಕರು, ಆ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಕೇಂದ್ರ ನಾಯಕರಿಗೆ ಎಚ್ಚರಿಕೆಯ..
                 

ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

22 hours ago  
ಸುದ್ದಿ / One India/ News  
                 

IRCTC ರೈಲ್ವೆ ಟಿಕೆಟ್ ಬುಕ್ಕಿಂಗ್, ಈ ಸೂಚನೆ ತಪ್ಪದೇ ಓದಿ

22 hours ago  
ಸುದ್ದಿ / One India/ News  
                 

50 ಲಕ್ಷ ವಲಸೆ ಕಾರ್ಮಿಕರನ್ನು 'ಗೂಡು' ಮುಟ್ಟಿಸಿದ ಶ್ರಮಿಕ್ ರೈಲು!

23 hours ago  
ಸುದ್ದಿ / One India/ News  
ನವದೆಹಲಿ, ಮೇ.29: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ಗೂಡು ಬಿಟ್ಟ ವಲಸೆ ಕಾರ್ಮಿಕರನ್ನು ತಮ್ಮೂರಿಗೆ ಸೇರಿಸಲು ಭಾರತೀಯ ರೈಲ್ವೆ ಸಚಿವಾಲಯವು ಶ್ರಮಿಕ್ ರೈಲುಗಳ ಸಂಚಾರವನ್ನು ಆರಂಭಿಸಿದ್ದು ಆಗಿದೆ. ದೇಶಾದ್ಯಂತ 3,736 ಶ್ರಮಿಕ್ ರೈಲುಗಳು ಸಂಚರಿಸಿದ್ದು, ಈ ಪೈಕಿ ಶೇ.40ರಷ್ಟು ರೈಲುಗಳು ಮಹಾರಾಷ್ಟ್ರ ಮತ್ತು ಗುಜರಾತ್ ನಿಂದಲೇ ಸಂಚರಿಸಿವೆ. ಗುಜರಾತ್ ನಿಂದ 979 ಶ್ರಮಿಕ್ ರೈಲು..
                 

ಪರಿಷ್ಕೃತ PM ವಯ ವಂದನ ಯೋಜನೆ ಹೊರ ತಂದ LIC

yesterday  
ಸುದ್ದಿ / One India/ News  
ನವದೆಹಲಿ, ಮೇ 29: ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿರುವ ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸಿ, ಪರಿಷ್ಕೃತಗೊಳಿಸಿ ಜಾರಿಗೊಳಿಸಲಾಗಿದೆ. ಈ ಯೋಜನೆಯ ಕೊನೆ ದಿನಾಂಕವನ್ನು 2020 ರ ಮಾರ್ಚ್ 31 ರ ಬದಲಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಹೀಗಾಗಿ 2023 ಮಾರ್ಚ್ 31 ರವರೆಗೆ ವಿಸ್ತರಣೆಗೊಂಡಿದೆ. ಈ..
                 

ಗ್ರಾಮ ಪಂಚಾಯಿತಿ ಚುನಾವಣೆ: ಚುನಾವಣಾ ಆಯೋಗದ ಮಹತ್ವದ ನಿರ್ಧಾರ

yesterday  
ಸುದ್ದಿ / One India/ News  
ಬೆಂಗಳೂರು, ಮೇ 29: ಮುಂದಿನ ತಿಂಗಳು ನಡೆಯಬೇಕಿದ್ದ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಕೊರೊನಾವೈರಸ್ ಹಾವಳಿಯಿಂದ ಮುಂದಕ್ಕೆ ಹಾಕಿ ಚುನಾವಣಾ ಆಯೋಗ ಆದೇಶಿಸಿದೆ. ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೂ ಬೇಡವೋ ಎಂಬ..
                 

ಚೀನಾವನ್ನೇ ಹಿಂದಿಕ್ಕಿದ ಭಾರತ: ಅಲ್ಲಿ 70, ಇಲ್ಲಿ 89,755 ಮಂದಿಗೆ ಸೋಂಕು!

yesterday  
ಸುದ್ದಿ / One India/ News  
ನವದೆಹಲಿ, ಮೇ.29: ಇಡೀ ಜಗತ್ತಿಗೆ ನೊವೆಲ್ ಕೊರೊನಾ ವೈರಸ್ ಎಂಬ ವಿಷವನ್ನು ಹಂಚಿಕೆ ಮಾಡಿದ್ದೇ ಡ್ರ್ಯಾಗನ್ ರಾಷ್ಟ್ರ ಚೀನಾ. ವಿಶ್ವದಾದ್ಯಂತ ಕೊವಿಡ್-19 ಸೋಂಕಿಗೆ 3,64,024ಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. 59,05,415ಕ್ಕೂ ಹೆಚ್ಚೂ ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ವಿಶ್ವಕ್ಕೆ ಮಹಾಮಾರಿಯನ್ನು ಕೊಡುಗೆಯಾಗಿ ನೀಡಿದ ಚೀನಾದಲ್ಲಿ ಇದೀಗ ಎಲ್ಲವೂ ತಣ್ಣಗಾಗಿದೆ. ಕೊವಿಡ್-19 ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತವು..
                 

Fact Check: ಸಾಸಿವೆ ಎಣ್ಣೆ ಮೂಗಿನೊಳಗೆ, ಕೊರನಾ ಹೊರಗೆ?

yesterday  
ಸುದ್ದಿ / One India/ News  
ನವದೆಹಲಿ, ಮೇ 28: ಸಾಸಿವೆ ಎಣ್ಣೆ ಬಳಕೆಯಿಂದ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಲಗಿಸಬಹುದು ಎಂಬ ಸುದ್ದಿಯನ್ನು ನಂಬಬಹುದು. ಆದರೆ, ಇದರ ಜೊತೆಗೆ ಸಾಸಿವೆ ಎಣ್ಣೆಯನ್ನು ಬಳಸಿ ಕೊರೊನಾವೈರಸ್ ಕೊಲ್ಲಬಹುದು, ಕೊವಿಡ್19ರಿಂದ ಮುಕ್ತಿ ಪಡೆಯಬಹುದು ಎಂಬ ಸುಳ್ಳು ಸುದ್ದಿಗಳು ವಾಟ್ಸಾಪ್ ನಲ್ಲಿ ಹಬ್ಬುತ್ತಿವೆ. ಆದರೆ ಇದೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ..
                 

ಮುಖಕ್ಕೆ ಬಂತು ಮಾಸ್ಕ್: ಲಿಪ್ ಸ್ಟಿಕ್ ಬದಲು ಐ-ಮೇಕಪ್ ನತ್ತ ಹೆಂಗಳೆಯರ ಚಿತ್ತ!

yesterday  
ಸುದ್ದಿ / One India/ News  
ಮುಂಬೈ, ಮೇ 28: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಹಲವು ವ್ಯಾಪಾರ-ಉದ್ಯಮಗಳಿಗೆ ಆಗಿರುವ ನಷ್ಟ ಅಷ್ಟಿಷ್ಟಲ್ಲ. ನೋವೆಲ್ ಕೊರೊನಾ ವೈರಸ್ ವಕ್ಕರಿಸಿದ್ದರಿಂದ ಲಿಪ್ ಸ್ಟಿಕ್ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಕೊರೊನಾ ವೈರಸ್ ಅನ್ನು ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಹೆಂಗಳೆಯರ ಚೆಂದುಟಿಗಳ ಅಂದ ಹೆಚ್ಚಿಸುತ್ತಿದ್ದ ಲಿಪ್ ಸ್ಟಿಕ್ ಗಳು ತನ್ನ ಹೊಳಪನ್ನು ಕಳೆದುಕೊಂಡಿವೆ. ಕೊರೊನಾ ಭೀತಿ..
                 

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರ ಗಮನಕ್ಕೆ

yesterday  
ಸುದ್ದಿ / One India/ News  
ಬೆಂಗಳೂರು, ಮೇ 28 : ನೈಋತ್ಯ ರೈಲ್ವೆಯ ಬೆಂಗಳೂರು-ಮೈಸೂರು ಮಾರ್ಗದ ಕೆಲವು ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ರೈಲು ಸೇವೆ ಆರಂಭವಾದ ಬಳಿಕ ಇದು ಜಾರಿಗೆ ಬರಲಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಈ ಕುರಿತು ಆದೇಶ ಹೊರಡಿಸಿದೆ. ಶ್ರೀರಂಗಪಟ್ಟಣ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳು ನಿಲ್ಲುವುದಿಲ್ಲ...
                 

ಶ್ರೀನಾಥ್ ಭಲ್ಲೆ ಅಂಕಣ; ಮನಸ್ಸು, ಹೃದಯಕ್ಕೂ ಶೋಧಕ ಬೇಕು

yesterday  
ಸುದ್ದಿ / One India/ Column  
                 

ಮೌಂಟ್ ಎವರೆಸ್ಟ್ ಮರು ಅಳತೆಗೆ ಆಗಮಿಸಿದ ಚೀನಾ ತಂಡ

2 days ago  
ಸುದ್ದಿ / One India/ News  
                 

ಉತ್ತರ ಭಾರತದಾದ್ಯಂತ ಇನ್ನೊಂದು ದಿನದೊಳಗೆ ಉಷ್ಣಗಾಳಿ ತಗ್ಗುವ ಸಾಧ್ಯತೆ

2 days ago  
ಸುದ್ದಿ / One India/ News  
ನವದೆಹಲಿ, ಮೇ 28: ಉತ್ತರಭಾರತದಾದ್ಯಂತ ಕಳೆದ ಒಂದುವಾರದಿಂದ ಜನರಿಗೆ ಬೆಂಕಿಯಂತೆ ಎರಗುತ್ತಿರುವ ಬಿಸಿಗಾಳಿಯು ಇನ್ನೊಂದು ದಿನದೊಳಗೆ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಭಾರತ ಹಾಗೂ ಮಧ್ಯಭಾರತದ ಕೆಲವೆಡೆ ಗರಿಷ್ಠ ಉಷ್ಣಾಂಶ 47 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಚುರುವಿನಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು ಅದು ಇದೀಗ 49.6..
                 

ವಿಯೆಟ್ನಾಂನಲ್ಲಿ 9ನೇ ಶತಮಾನದ ವಿಶಿಷ್ಟ ಶಿವಲಿಂಗ ಪತ್ತೆ

2 days ago  
ಸುದ್ದಿ / One India/ News  
ಹನೋಯ್/ ನವದೆಹಲಿ, ಮೇ 28: ವಿಯೆಟ್ನಾಂನಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ. ವಿಯೆಟ್ನಾಂನ ಮೈಸನ್ ಪ್ರದೇಶದಲ್ಲಿ ಉತ್ಖನನ ನಡೆಸುವಾಗ ಈ ವಿಶಿಷ್ಟ ಶಿವಲಿಗವನ್ನು ಭಾರತದ ಪುರಾತತ್ವ ಇಲಾಖೆ(ASI) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮೈಸನ್ ಪ್ರದೇಶದ ಚಾಮ್ ದೇಗುಲಗಳ ಸಮೂಹದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಇಲ್ಲಿ ಅನೇಕ ಶಿಥಿಲವಾಸ್ಥೆ, ಪೂರ್ಣ..
                 

ಕೊರೊನಾ ವೈರಸ್ ನಿಂದ 'ದೂರ'ವಿರಲು ಇಲ್ಲಿದೆ 'ಮಾರ್ಗ'ಸೂಚಿ!

2 days ago  
ಸುದ್ದಿ / One India/ News  
ನವದೆಹಲಿ, ಮೇ.28: ಜಗತ್ತನ್ನೇ ಕಾಡುತ್ತಿರುವ ನೊವೆಲ್ ಕೊರೊನಾ ವೈರಸ್ ಹಾವಳಿಯಿಂದ ಭಾರತ ಕೂಡಾ ಹೊರತಾಗಿಲ್ಲ. ದೇಶಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ಈಗಾಗಲೇ ದೃಢಪಟ್ಟಿದೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ ಭಾರತಾದ್ಯಂತ 4,534ಕ್ಕೂ ಅಧಿಕ ಮಂದಿ ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. 1,58,086ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಈ..
                 

ಕರ್ನಾಟಕ; ಸರ್ಕಾರಿ ಬಸ್‌ ಸಂಚಾರಕ್ಕೆ ಹೆಚ್ಚಿದ ಬೇಡಿಕೆ

2 days ago  
ಸುದ್ದಿ / One India/ News  
                 

ಕರ್ನಾಟಕಕ್ಕೆ ಮಿಡತೆ ದಾಳಿ ಆತಂಕ; ಸರ್ಕಾರಕ್ಕೆ ಎಚ್‌ಡಿಕೆ ಸಲಹೆ

2 days ago  
ಸುದ್ದಿ / One India/ News  
ಬೆಂಗಳೂರು, ಮೇ 27 : ಉತ್ತರ ಭಾರತದ ಕೆಲವು ರಾಜ್ಯಗಳನ್ನು ರಕ್ಕಸ ಮಿಡತೆಗಳು ಬಾಧಿಸುತ್ತಿವೆ. ಕರ್ನಾಟಕ ರಾಜ್ಯಕ್ಕೂ ಮಿಡತೆಗಳು ಆಗಮಿಸುವ ಆತಂಕ ರೈತರನ್ನು ಕಾಡುತ್ತಿದೆ. ಈ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ. ಬುಧವಾರ ತಮ್ಮ ಫೇಸ್ ಬುಕ್ ಪುಟದಲ್ಲಿ  ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ರಾಜ್ಯ..
                 

ಮತ್ತೆ ಹಳಿ ಮೇಲೆ ಗೋಲ್ಡನ್ ಚಾರಿಯಟ್; ದರದಲ್ಲಿ ಭಾರಿ ಕಡಿತ

2 days ago  
ಸುದ್ದಿ / One India/ News  
                 

ಟ್ರೂಕಾಲರ್‌ನಿಂದ 4 ಕೋಟಿ ಭಾರತೀಯರ ಮಾಹಿತಿ ಸೋರಿಕೆ!

2 days ago  
ಸುದ್ದಿ / One India/ News  
ಬೆಂಗಳೂರು, ಮೇ 27: ಭಾರತದ ಟ್ರೂಕಾಲರ್ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಲಾಗಿದ್ದು, ಡಾರ್ಕ್ ವೆಬ್ ನಲ್ಲಿ 75,000 ರು ಗಳಿಗೆ ಮಾಹಿತಿ ಬಿಕರಿಯಾಗಿದೆ ಎಂಬ ಆಘಾತಕಾರಿ ಸುದ್ದಿಯನ್ನು ಆನ್‌ಲೈನ್ ಗುಪ್ತಚರ ಸಂಸ್ಥೆ ಸೈಬಲ್ ನೀಡಿದೆ. ಸೈಬಲ್ ಕಲೆ ಹಾಕಿರುವ ಮಾಹಿತಿ ಪ್ರಕಾರ ಸುಮಾರು 4.75ಕೋಟಿಗೂ ಅಧಿಕ ಭಾರತೀಯ ಬಳಕೆದಾರರ ಟ್ರೂಕಾಲರ್ ಮಾಹಿತಿ ಸೋರಿಕೆಯಾಗಿದೆ. ಟ್ರೂಕಾಲರ್‌..
                 

ಲಾಕ್‌ಡೌನ್‌ ತೆರವಿನ ಬಳಿಕ ಯಡಿಯೂರಪ್ಪ ಸಂಪುಟದ ಸಚಿವರಿಗೆ ಕಾದಿದೆ \"ಶಾ'ಕ್!

2 days ago  
ಸುದ್ದಿ / One India/ News  
ಬೆಂಗಳೂರು, ಮೇ 27: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೆ ಒಂದು ರೀತಿಯಲ್ಲಿ ಸ್ತಬ್ದವಾಗಿದೆ. ಜನರ ಜೀವ ರಕ್ಷಣೆ ಬಿಟ್ಟು ಯಾವುದೇ ಕೆಲಸಕ್ಕೂ ಸರ್ಕಾರ ಗಮನ ಹರಿಸಿಲ್ಲ. ಆದರೆ ಇದೇ ಸ್ಥಿತಿ ಬಹಳಷ್ಟು ದಿನ ಮುಂದುವರೆಯುವ ಸಾಧ್ಯತೆಗಳಿಲ್ಲ. ಸರ್ಕಾರ ನಿಧಾನವಾಗಿ ಲಾಕ್‌ಡೌನ್‌ಗೆ ಒಂದೊಂದಾಗಿ ಸಡಿಲಿಕೆ ಕೊಡುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ..
                 

ಇನ್ನು ಯಾರಿಗೂ ಕೊರೊನಾ ಪರಿಹಾರ ಪ್ಯಾಕೇಜ್ ಇಲ್ಲ ಎಂದ ಯಡಿಯೂರಪ್ಪ!

2 days ago  
ಸುದ್ದಿ / One India/ News  
ಬೆಂಗಳೂರು, ಮೇ 27: ''ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇನ್ನು ಯಾವುದೇ ಸಮುದಾಯಕ್ಕೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಬುಧವಾರ ಪಂಡಿತ್ ಜವಹರಲಾಲ್ ನೆಹರು ಅವರ 56 ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇರುವ ನೆಹರು ಅವರ ಪ್ರತಿಮೆಗೆ ಸಿಎಂ‌ ಯಡಿಯೂರಪ್ಪ ಮಾಲಾರ್ಪಣೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು...
                 

ಅದ್ಯಾಕೋ.. ಜೀವಕ್ಕೆ ಕೊರೊನಾ ಕುತ್ತು, ಜೀವನಕ್ಕೆ ಮಿಡತೆ ಆಪತ್ತು!?

3 days ago  
ಸುದ್ದಿ / One India/ News  
ನವದೆಹಲಿ, ಮೇ.27: ಬರಗಾಲದಲ್ಲಿ ಅಧಿಕ ಮಾಸ. ಉರಿಯುವ ಬೆಂಕಿಗೆ ತುಪ್ಪ ಸುರಿಯೋದು. ಇಂಥ ಗಾದೆಮಾತುಗಳು ಇದೀಗ ಭಾರತವು ಎದುರಿಸುತ್ತಿರುವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಆಗಿ ಬಿಟ್ಟಿವೆ. ಇಂಥ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿರುವುದೇ ಮಿಡತೆಗಳ ಹಾವಳಿ. ಭಾರತದಲ್ಲಿ ಕೊರೊನಾ ವೈರಸ್ 4,500ಕ್ಕೂ ಅಧಿಕ ಮಂದಿ ಜೀವವನ್ನು ಬಲಿ ತೆಗೆದುಕೊಂಡಿದ್ದರೆ, ಇದರ ಬೆನ್ನಲ್ಲೇ ನಡೆದಿರುವ ಮಿಡತೆಗಳ ದಾಳಿ ಪ್ರತಿನಿತ್ಯ 35,000ಕ್ಕೂ..
                 

ಗಡಿ ಉದ್ವಿಗ್ನತೆ: ಆತಂಕ ಹುಟ್ಟಿಸಿದ ಚೀನಾ ಆಧ್ಯಕ್ಷರ ಮಾತು ಹಾಗೂ ಪ್ರಧಾನಿ ಮೋದಿ ಸಭೆ

3 days ago  
ಸುದ್ದಿ / One India/ News  
ಬಿಜಿಂಗ್, ಮೇ 27: ಕೊರೊನಾ ಭೀತಿಯ ನಡುವೆಯೇ ಚೀನಾ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಭಾರತ ಚೀನಾ ಗಡಿ ಪ್ರದೇಶವಿರುವ ಲಡಾಕ್‌ ಸೆಕ್ಟರ್‌ನಲ್ಲಿ ಉಬಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆಯೇ ಚೀನಾ ಅಧ್ಯಕ್ಷ ಆಡಿರುವ ಮಾತು ವಿಶ್ವ ಮಟ್ಟದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸಭೆಯಲ್ಲಿ..
                 

ರಾಜಸ್ಥಾನ ವಿಶ್ವದ ಹಾಟೆಸ್ಟ್‌ ಸಿಟಿ: ಎಲ್ಲೆಲ್ಲಿ ಗರಿಷ್ಠ ಉಷ್ಣಾಂಶ ಎಷ್ಟಿದೆ?

3 days ago  
ಸುದ್ದಿ / One India/ News  
ಜೈಪುರ, ಮೇ 27: ದೇಶಾದ್ಯಂತ ಉರಿ ಬಿಸಿಲು ಹೆಚ್ಚುತ್ತಿದೆ, ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದೇಶದ ಹಲವೆಡೆ ಚಂಡಮಾರುತ ಹಾನಿಯನ್ನುಂಟು ಮಾಡಿದೆ, ಇನ್ನು ಕೆಲವೆಡೆ ಮಳೆಯಾಗುತ್ತಿದೆ. ಆದರೆ ಗರಿಷ್ಠ ಉಷ್ಣಾಂಶವೂ ಏರುತ್ತಿದೆ. ರಾಜಸ್ಥಾನದ ಚುರುವಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬಿಸಿ ಗಾಳಿ ಭಯ: ಉತ್ತರ ಭಾರತದಾದ್ಯಂತ ರೆಡ್‌ ಅಲರ್ಟ್ ಘೋಷಣೆ ಇದು..
                 

3C ನಿಯಮ ಪಾಲಿಸಿ ಕೊವಿಡ್ ಯುದ್ಧ ಗೆದ್ದ ಜಪಾನ್

3 days ago  
ಸುದ್ದಿ / One India/ News  
ಟೋಕಿಯೊ, ಮೇ 26: ಟೋಕಿಯೊ ಮಹಾನಗರ ಸೇರಿದಂತೆ ನಾಲ್ಕು ನಗರಗಳ ತುರ್ತು ಪರಿಸ್ಥಿತಿಯನ್ನು ಹಿಂಪಡೆದಿರುವುದಾಗಿ ಪ್ರಧಾನಿ ಶಿಂಜೋ ಅಬೆ ಘೋಷಿಸುತ್ತಿದ್ದಂತೆ ಇಡೀ ಜಗತ್ತೇ ಒಮ್ಮೆ ಜಪಾನ್ ಕಡೆಗೆ ಹಿಂತಿರುಗಿ ನೋಡುವಂತಾಗಿದೆ. ಲಾಕ್ಡೌನ್, ಸಾಮೂಹಿಕ ಸೋಂಕು ಪರೀಕ್ಷೆ ವಿಧಾನ ಅನುಸರಿಸದೇ ತನ್ನದೇ ಹಾದಿಯಲ್ಲಿ ಕೊವಿಡ್ 19 ವಿರುದ್ಧ ಜಯ ಸಾಧಿಸಿದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರ ಜಪಾನ್..
                 

ಕಂದಾಯ, ಮುಜರಾಯಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಿಎಂ ಯಡಿಯೂರಪ್ಪ

3 days ago  
ಸುದ್ದಿ / One India/ News  
ಬೆಂಗಳೂರು, ಮೇ 26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕಂದಾಯ ಹಾಗೂ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ವಿಧಾನಸೌಧದಲ್ಲಿ ಜರುಗಿತು. ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ, ಅನುಭವ ಮಂಟಪ ಸ್ಥಾಪನೆಗೆ 100 ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಲಾಯಿತು. ಭೂ ಸುಧಾರಣೆಯ ಅಡಿಯಲ್ಲಿ 164 ತಾಲ್ಲೂಕುಗಳಲ್ಲಿ ಭೂ ನ್ಯಾಯ ಮಂಡಳಿ ರಚಿಲು ಮುಖ್ಯಮಂತ್ರಿ ಸೂಚಿಸಿದರು. ಬ್ರೇಕಿಂಗ್..
                 

ಬ್ರೇಕಿಂಗ್ ನ್ಯೂಸ್; ಜೂನ್ 1ರಿಂದ ಬಾಗಿಲು ತೆರೆಯಲಿವೆ ದೇವಾಲಯ

3 days ago  
ಸುದ್ದಿ / One India/ News  
                 

Stuff ಸುದ್ದಿ: ಇಡೀ ಸುದ್ದಿಸಂಸ್ಥೆ ಖರೀದಿಸಲು ಕೇವಲ 46.61 ರೂಪಾಯಿ!

3 days ago  
ಸುದ್ದಿ / One India/ News  
ವೆಲ್ಲಿಂಗ್ಟನ್, ಮೇ.26: ಕೊರೊನಾ ವೈರಸ್ ಹರಡುವಿಕೆ ಹಾಗೂ ಲಾಕ್ ಡೌನ್ ನಿಂದಾಗಿ ಸಾವಿರಾರು ಕಂಪನಿಗಳು ಬಾಗಿಲು ಹಾಕಿಕೊಳ್ಳುತ್ತಿವೆ. ಆದಾಯವಿಲ್ಲದೇ ಸಂಸ್ಥೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಸಾವಿರಾರು ಕಂಪನಿಗಳು ಆದಾಯವಿಲ್ಲದೇ ನಷ್ಟದಲ್ಲಿವೆ. ಇದರ ನಡುವೆ ನ್ಯೂಜಿಲೆಂಡ್ ಸುದ್ದಿ ಸಂಸ್ಥೆಯೊಂದು ಕೇವಲ 1 ನ್ಯೂಜಿಲೆಂಡ್ ಡಾಲರ್(46.61 ರೂಪಾಯಿ)ಗೆ ಮಾರಾಟವಾಗಿದೆ...
                 

ಡ್ರೀಮ್‌ ಗರ್ಲ್‌ ಹೇಮಾಮಾಲಿನಿಯವರ ಹೆಲಿಕ್ಯಾಪ್ಟರ್ರು, ರೈತ ಮಹಿಳೆ ನಳಿನಿಗೌಡರ ಬುಲೆಟ್ಟು..!

3 days ago  
ಸುದ್ದಿ / One India/ News  
ಬೆಂಗಳೂರು, ಮೇ 26: ಕೋಲಾರದಲ್ಲಿ ರೈತ ಮಹಿಳೆಯೊಬ್ಬರ ಮೇಲೆ ಸಚಿವ ಮಾಧುಸ್ವಾಮಿ ಅವರ 'ರಾಸ್ಕಲ್ ಪ್ರಕರಣ' ಟ್ವಿಸ್ಟ್ ಪಡೆದುಕೊಂಡಿದೆ. ಕಳೆದ ವಾರ ಕೋಲಾರ ತಾಲೂಕಿನ ಎಸ್. ಅಗ್ರಹಾರ ಕೆರೆ ವೀಕ್ಷಿಸಲು ಮಾಧುಸ್ವಾಮಿ ತೆರಳಿದ್ದರು, ಆಗ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎ. ನಳಿನಿ ಗೌಡ ತಮ್ಮ ಸಮಸ್ಯೆ ವಿವರಿಸುತ್ತಿದ್ದಾಗ ತಾಳ್ಮೆ ಕಳೆದುಕೊಂಡಿದ್ದ ಮಾಧುಸ್ವಾಮಿ ರಾಸ್ಕಲ್ ಎಂದು..
                 

ಟಿವಿಎಸ್ ಮೋಟಾರ್ ಉದ್ಯೋಗಿಗಳಿಗೆ ಸಂಬಳ ಕಡಿತ

3 days ago  
ಸುದ್ದಿ / One India/ News  
ಬೆಂಗಳೂರು, ಮೇ 26: ಭಾರತದ ಮೂರನೇ ಅತಿದೊಡ್ಡ ದ್ವಿಚಕ್ರ ತಯಾರಕ ಕಂಪನಿ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಉದ್ಯೋಗಿಗಳಿಗೆ ತಾತ್ಕಾಲಿಕ ಸಂಬಳ ಕಡಿತವನ್ನು ಘೋಷಿಸಿದೆ. ಕೊರನಾವೈರಸ್ ದೆಸೆಯಿಂದ ಲಾಕ್ಡೌನ್ ಆಗಿ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ಸಂಸ್ಥೆಗೆ ತಕ್ಕಮಟ್ಟಿನ ನಷ್ಟ ಉಂಟಾಗಿದೆ. ಈ ವರ್ಷಾರಂಭದಲ್ಲೇ ಬಜಾಜ್ ಆಟೋ ಲಿಮಿಟೆಡ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ 'ಚೇತಕ್' ಅನ್ನು ದೇಶೀಯ ಮಾರುಕಟ್ಟೆಯಲ್ಲಿ..
                 

ಕೊರೊನಾ ವೈರಸ್ ಸೋಂಕಿನ 'ಎರಡನೇ ಅಲೆ' ಬಗ್ಗೆ WHO ನೀಡಿದ ವಾರ್ನಿಂಗ್ ಏನು?

4 days ago  
ಸುದ್ದಿ / One India/ News  
                 

ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!

4 days ago  
ಸುದ್ದಿ / One India/ News  
ಜೆನೆವಾ, ಮೇ 26: ಮಹಾಮಾರಿ ಕೋವಿಡ್-19 ಗೆ ಔಷಧಿ ಮತ್ತು ಲಸಿಕೆ ಕಂಡುಹಿಡಿಯಲು ವಿಶ್ವದಾದ್ಯಂತ ವಿಜ್ಞಾನಿಗಳು, ಸಂಶೋಧಕರು ಹಗಲಿರುಳು ಶ್ರಮ ಪಡುತ್ತಿದ್ದಾರೆ. ಅಂಥದ್ರಲ್ಲಿ, ಕೋವಿಡ್-19 ರೋಗಕ್ಕೆ ಚಿಕಿತ್ಸೆಯಾಗಿ HCQ ಅರ್ಥಾತ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಬಳಕೆ ಮಾಡಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತೇಜನ ನೀಡಿದ್ದರು. ಸಾಲದಕ್ಕೆ ಮಲೇರಿಯಾ ನಿರೋಧಕ ಔಷಧಿ ''ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಎರಡು ವಾರಗಳ ಕಾಲ..
                 

ಆನ್‌ಲೈನ್‌ನಲ್ಲಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವ

4 days ago  
ಸುದ್ದಿ / One India/ News  
ನವದೆಹಲಿ, ಮೇ 26: ಕೊವಿಡ್ 19 ಮಹಾಮಾರಿಯಿಂದಾಗಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ವಾರ್ಷಿಕೋತ್ಸವವನ್ನು ಆನ್‌ಲೈನ್‌ನಲ್ಲಿ ಆಚರಿಸಿಕೊಳ್ಳುವಂತಾಗಿದೆ. ಸಚಿವರುಗಳಿಂದ ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್ ನಡೆಯಲಿದೆ, ಸಾರ್ವಜನಿಕರೊಂದಿಗೆ ವಿಡಿಯೋ ಸಂವಾದ ಹಾಗೆಯೇ ಇ-ಜಾಥಾವನ್ನು ಕೂಡ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಭಾರತದಲ್ಲಿ 14 ದಿನದಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಡಬಲ್! ಕಳೆದ ವರ್ಷ ಮೇ 30..
                 

ಬಿಗ್ ನ್ಯೂಸ್; ಸರ್ಕಾರಿ ಕ್ವಾರಂಟೈನ್ ನಿಯಮ ಬದಲಿಸಿದ ಕರ್ನಾಟಕ

4 days ago  
ಸುದ್ದಿ / One India/ News  
ಬೆಂಗಳೂರು, ಮೇ 25 :  ಕರ್ನಾಟಕ ಸರ್ಕಾರ ಕ್ವಾರಂಟೈನ್‌ ನಿಯಮದಲ್ಲಿ ಮತ್ತೆ ಬದಲಾವಣೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸಚಿವರು, ಅಧಿಕಾರಿಗಳು ಕ್ವಾರಂಟೈನ್‌ನಲ್ಲಿರಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದರು. ಸರ್ಕಾರಿ ಕ್ವಾರಂಟೈನ್‌ಗೆ ಒಳಗಾಗದೇ ಮನೆಗೆ ತೆರಳಿದ್ದರು. ಅಲ್ಲಿಂದ ವಿಧಾನಸೌಧಕ್ಕೆ ಆಗಮಿಸಿದ ಸಭೆ ನಡೆಸಿದ್ದರು. ಈ ಬಗ್ಗೆ..
                 

'ಭಾರತೀಯ ಸೇನೆ ಮುಖ್ಯಸ್ಥ ಗೂರ್ಖಾ ಭಾವನೆಗಳನ್ನು ನೋಯಿಸಿದ್ದಾರೆ': ನೇಪಾಳ ರಕ್ಷಣಾ ಸಚಿವ

4 days ago  
ಸುದ್ದಿ / One India/ News  
ದೆಹಲಿ, ಮೇ 25: ಭಾರತಕ್ಕಾಗಿ ದೀರ್ಘ ಸಮಯದಿಂದ ತ್ಯಾಗ ಮಾಡುತ್ತಿರುವ ಗೂರ್ಖಾ ಸಮುದಾಯದ ಭಾವನೆಗಳಿಗೆ ಭಾರತೀಯ ಸೇನೆ ಮುಖ್ಯಸ್ಥರು ನೋವು ಉಂಟು ಮಾಡಿದ್ದಾರೆ ಎಂದು ನೇಪಾಳ ರಕ್ಷಣಾ ಸಚಿವ ಈಶ್ವರ್ ಪೋಖ್ರೆಲ್ ಆರೋಪ ಮಾಡಿದ್ದಾರೆ. 'ದಿ ರೈಸಿಂಗ್ ನೇಪಾಳ' ಆನ್‌ಲೈನ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಈಶ್ವರ್ ಪೋಖ್ರೆಲ್ 'ಕಾಲಾಪಾನಿ ವಿಷಯದಲ್ಲಿ ನೇಪಾಳದ ಪರವಾಗಿ ಚೀನಾದ..
                 

Fact Check: ಲಾಕ್ಡೌನ್ ಫಂಡ್, ಸರ್ಕಾರದಿಂದ 5 ಸಾವಿರ ರು?

4 days ago  
ಸುದ್ದಿ / One India/ News  
ಬೆಂಗಳೂರು, ಮೇ 25: ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮೋದಿ ಸರ್ಕಾರದಿಂದ ಪ್ರತಿಯೊಬ್ಬರಿಗೂ 15 ಸಾವಿರ ರು ಸಿಗಲಿದೆ. ತಪ್ಪದೇ ಅರ್ಜಿ ತುಂಬಿ ಪಡೆದುಕೊಳ್ಳಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ನೆನಪಿರಬಹುದು. ಈಗ ಇದೇ ರೀತಿ ಮತ್ತೊಂದು ಸುಳ್ಳು ಸುದ್ದಿ ಹಬ್ಬಿದೆ. ಲಾಕ್ಡೌನ್ ಫಂಡ್ ಸ್ಥಾಪಿಸಲಾಗಿದೆ. ಎಲ್ಲರಿಗೂ ಇದರಿಂದ ಹಣ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ...
                 

ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಾಪಸ್ ಪಡೆದ ಅಮೂಲ್ಯ

4 days ago  
ಸುದ್ದಿ / One India/ News  
ಬೆಂಗಳೂರು, ಮೇ 25 :  ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಮೂಲ್ಯ ಲಿಯೋನ್ ಪರ ವಕೀಲರು ವಾಪಸ್ ಪಡೆದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಅಮೂಲ್ಯ ಬಂಧನದಲ್ಲಿದ್ದಾರೆ. ಅಮೂಲ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠದ..
                 

ಭಾರತದಲ್ಲಿರುವ ಚೀನಿಯರ ಸ್ಥಳಾಂತರಕ್ಕೆ ಮುಂದಾದ ಚೀನಾ!

4 days ago  
ಸುದ್ದಿ / One India/ News  
ನವದೆಹಲಿ, ಮೇ 25: ಕೊರೊನಾ ಹಾವಳಿ ನಡುವೆ ಭಾರತದಲ್ಲಿರುವ ಚೀನಿಯರ ಬಗ್ಗೆ ಚೀನಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿರುವ ಚೀನಿಯರನ್ನು ತವರಿಗೆ ಕರೆದುಕೊಂಡು ಹೋಗಲು ಯೋಜನೆ ರೂಪಿಸಿದೆ ಚೀನಾ ಸರ್ಕಾರ. ಈ ಬಗ್ಗೆ ಇಂದು ನವದೆಹಲಿಯಲ್ಲಿರುವ ಚೀನಿ ರಾಯಭಾರ ಕಚೇರಿ ಸೂಚನೆ ಹೊರಡಿಸಿದ್ದು, ಭಾರತದಲ್ಲಿರುವ ಚೀನಿಯರನ್ನು ವಿಶೇಷ ವಿಮಾನದ ಮೂಲಕ ತವರಿಗೆ ಕರೆಯಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ..
                 

ಕೊರೊನಾ ಸಂಕಷ್ಟ: ಇರಾನ್ ಹಿಂದಿಕ್ಕಿದ ಭಾರತ ಟಾಪ್ ಹತ್ತರೊಳಗೆ ಪ್ರವೇಶ

4 days ago  
ಸುದ್ದಿ / One India/ News  
ದೆಹಲಿ, ಮೇ 25: ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಬಳಿಕ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಸಂಕಷ್ಟ ತಂದೊಡ್ಡಿದೆ. ಯುಎಸ್, ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ ಅಂತಹ ರಾಷ್ಟ್ರಗಳಲ್ಲಿ ಮಾರಣಹೋಮವೇ ನಡೆದು ಹೋಗಿದೆ. ಲಕ್ಷಾಂತರ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚು. ಭವಿಷ್ಯದಲ್ಲಿ ಭಾರತಕ್ಕೂ ಇಂತಹ ಸ್ಥಿತಿ..
                 

ಎಸ್. ಎಸ್. ಎಲ್‌. ಸಿ ಪರೀಕ್ಷೆ ರದ್ದು ಮಾಡಿ; ಸಚಿವರಿಗೆ ಸಿದ್ದರಾಮಯ್ಯ ಪತ್ರ

4 days ago  
ಸುದ್ದಿ / One India/ News  
                 

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎರಡನೇ ಬಾರಿಗೆ ಪ್ರತ್ಯಕ್ಷ

4 days ago  
ಸುದ್ದಿ / One India/ News  
ಸಿಯೋಲ್, ಮೇ 25: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎರಡನೇ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ. ಕೇಂದ್ರ ಮಿಲಿಟರಿ ಕಮಿಷನ್ ಆಯೋಜಿಸಿದ್ದ ಸಭೆಯಲ್ಲಿ ಕಿಮ್ ಭಾಗವಹಿಸಿದ್ದರು. ದೇಶದಲ್ಲಿ ಪರಮಾಣು ಯುದ್ಧಕ್ಕೆ ಸಂಬಂಧಿಸಿದಂತಹ ಸಭೆ ಇದಾಗಿತ್ತು. ಊಹಾಪೋಹಗಳಿಗೆ ತೆರೆ: ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ಇದಕ್ಕೂ ಮುನ್ನ ಮೇ 1 ರಂದು ಸ್ಥಳೀಯ ಫರ್ಟಿಲೈಸರ್ ಕಾರ್ಖಾನೆಯ ಉದ್ಘಾಟನೆಗೆಂದು..
                 

ದೇಶೀಯ ವಿಮಾನಯಾನ ಆರಂಭ: ಕರ್ನಾಟಕಕ್ಕೆ ಬರುವವರಿಗೆ 'ಈ' ನಿಯಮಗಳು ಕಡ್ಡಾಯ!

5 days ago  
ಸುದ್ದಿ / One India/ News  
ಬೆಂಗಳೂರು, ಮೇ 25: ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಮಾರ್ಚ್ 25 ರಿಂದ ಭಾರತದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಇದೀಗ ಲಾಕ್ ಡೌನ್ 4.0 ಜಾರಿಯಲ್ಲಿದ್ದು, ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಪರಿಣಾಮ ದೇಶೀಯ ವಿಮಾನಯಾನಕ್ಕೆ ಅವಕಾಶ ನೀಡಲಾಗಿದೆ. ಇಂದಿನಿಂದ (ಮೇ 25) ವಿಮಾನ ಸೇವೆ ಪುನರಾರಂಭಗೊಂಡಿದೆ. ತಮಿಳುನಾಡು ಸೇರಿದಂತೆ ಇತರೆ..
                 

ಸೋನಿಯಾ ಗಾಂಧಿ ವಿರುದ್ದ ಎಫ್ಐಆರ್: ಸಿಎಂ ಬಿಎಸ್ವೈ ವಿರುದ್ದ ಬಿಜೆಪಿಗರ ಅಸಮಾಧಾನ?

5 days ago  
ಸುದ್ದಿ / One India/ News  
ಸಿಎಂ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಮತ್ತು ವಕೀಲರೂ ಆಗಿರುವ ಪ್ರವೀಣ್ ಕುಮಾರ್ ಎನ್ನುವವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿ ಎಫ್ಐಆರ್ ದಾಖಲಿಸಿರುವುದು, ಬಿಜೆಪಿ ಮತ್ತು ಕಾಂಗ್ರೆಸ್ ಸಂಘರ್ಷಕ್ಕೆ ಕಾರಣವಾಗಿದೆ. ದೇಶದಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ವಿದ್ಯಮಾನದ ವಿರುದ್ದ ಕಾಂಗ್ರೆಸ್ ಮುಖಂಡರು ತಿರುಗಿಬಿದ್ದಿದ್ದು, ಈಗಾಗಲೇ..
                 

ಕೊವಿಡ್ 19 ಆಕ್ಟೀವ್ ಪ್ರಕರಣ: ವಿಶ್ವದಲ್ಲಿ 5ನೇ ಸ್ಥಾನದಲ್ಲಿ ನಿಂತ ಭಾರತ

5 days ago  
ಸುದ್ದಿ / One India/ News  
ನವದೆಹಲಿ, ಮೇ 25: ಕೊರೊನಾವೈರಸ್ ಆಕ್ಟೀವ್ ಪ್ರಕರಣಗಳು ಹೆಚ್ಚಿರುವ ವಿಶ್ವದ ಟಾಪ್ 10 ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿ ನಿಂತಿದೆ. ಭಾರತದಲ್ಲಿ 1,37,000 ಕರೊನಾ ಸೋಂಕಿತ ಪ್ರಕರಣಗಳಿವೆ. 4 ಸಾವಿರ ಮಂದಿ ಮೃತಪಟ್ಟಿದ್ದಾರೆ. 75,700 ಆಕ್ಟೀವ್ ಪ್ರಕರಣಗಳಿವೆ. ದೆಹಲಿ: ಏಮ್ಸ್‌ನ ಹಿರಿಯ ವೈದ್ಯರೊಬ್ಬರು ಕೊರೊನಾ ವೈರಸ್‌ಗೆ ಬಲಿ ಅಮೆರಿಕ, ರಷ್ಯಾ, ಬ್ರೆಜಿಲ್, ಫ್ರಾನ್ಸ್ ನಂತರದ ಸ್ಥಾನದಲ್ಲಿ ಭಾರತ..
                 

ಪಶ್ಚಿಮ ಬಂಗಾಳ, ಆಂಧ್ರ ಹೊರತುಪಡಿಸಿ ದೇಶೀಯ ವಿಮಾನ ಸೇವೆ ಪುನರಾರಂಭ

5 days ago  
ಸುದ್ದಿ / One India/ News  
ನವದೆಹಲಿ, ಮೇ 25: ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಹೊರತುಪಡಿಸಿ ಇಂದಿನಿಂದ(ಮೇ 25)ದೇಶಾದ್ಯಂತ ವಿಮಾನ ಸೇವೆ ಪುನರಾರಂಭಗೊಳ್ಳಲಿದೆ. ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ ಮೇ 26, ಮತ್ತು ಮೇ 28ರವರೆಗೂ ವಿಮಾನ ಸೇವೆಯನ್ನು ಮುಂದೂಡಲು ನಿರ್ಧರಿಸಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ನೀಡಿರುವ ಮಾಹಿತಿಯಂತೆ ದೇಶಾದ್ಯಂತ 3867 ಜನರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು,..
                 

ಅಂತಾರಾಷ್ಟ್ರೀಯ, ದೇಶೀಯ ಪ್ರಯಾಣಿಕರಿಗೆ ಆರೋಗ್ಯ ಸಚಿವಾಲಯದ ಮಾರ್ಗಸೂಚಿ

5 days ago  
ಸುದ್ದಿ / One India/ News  
ನವದೆಹಲಿ, ಮೇ 24: ಅಂತಾರಾಷ್ಟ್ರೀಯ ಹಾಗೂ ದೇಶೀಯ ಪ್ರಯಾಣಿಕರಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೊಸದಾಗಿ ಮಾರ್ಗಸೂಚಿ ಹೊರಡಿಸಿದೆ. ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ. ಏಳು ದಿನಗಳ ಕಾಲ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಇರಲಿದ್ದು, ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ಮಂಗಳೂರಿನಿಂದ ವಿಮಾನಯಾನ, ಪ್ರಯಾಣಕ್ಕೆ ಮಾರ್ಗಸೂಚಿ -ಗರ್ಭಿಣಿ, ಮನೆಯಲ್ಲಿ ಯಾರಾದರೂ ತೀರಿಹೋದ ಸಂದರ್ಭ, 10 ವರ್ಷಕ್ಕಿಂತ..
                 

ಇನ್ನು ಮುಂದೆ ಪೊಲೀಸ್ ಪೇದೆ ಎನ್ನುವಂತಿಲ್ಲ, ಬರೆಯುವಂತಿಲ್ಲ

5 days ago  
ಸುದ್ದಿ / One India/ News  
ಬೆಂಗಳೂರು, ಮೇ 24 : ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇಲಾಖೆಯ ಶ್ರೇಣಿವಾರು ಹುದ್ದೆಯ ಹೆಸರಿನಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ 'ಪೊಲೀಸ್ ಪೇದೆ' ಅನ್ನುವಂತಿಲ್ಲ. ಹೌದು, ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ಆದೇಶದ ಪ್ರಕಾರ ಇನ್ನು ಮುಂದೆ ಪೇದೆ, ಮುಖ್ಯ ಪೇದೆ ಎಂದು ಕರೆಯುವಂತಿಲ್ಲ, ಬರೆಯುವಂತೆಯೂ ಇಲ್ಲ. ಜನರ ಜೊತೆ ನೇರವಾಗಿ ಸಂಪರ್ಕದಲ್ಲಿರುವ..
                 

ಸೆಕೆ, ಸೆಕೆ: ಕರ್ನಾಟಕ, ದೆಹಲಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣಾಂಶ

5 days ago  
ಸುದ್ದಿ / One India/ News  
ನವದೆಹಲಿ, ಮೇ 24: ಕರ್ನಾಟಕ ಹಾಗೂ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದು, ಕೆಲವೇ ದಿನಗಳಲ್ಲಿ ಗರಿಷ್ಠ ಉಷ್ಣಾಂಶ 46 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದೆ. ಬಿಸಿ ಗಾಳಿ ಬೀಸುತ್ತಿದೆ. ಇದೇ ಮೇ 29ರಷ್ಟೊತ್ತಿಗೆ ಉಷ್ಣಾಂಶ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಹವಾಮಾನ ಇಲಾಖೆಯ ಮಾಹಿತಿಯಂತೆ ಗನಿಷ್ಠ ಉಷ್ಣಾಂಶ 26 ಹಾಗೂ ಗರಿಷ್ಠ ಉಷ್ಣಾಂಶ..
                 

ಲಡಾಖ್‌ನಲ್ಲಿ ಚೀನಾದಿಂದ ಭಾರತೀಯ ಯೋಧರ ಬಂಧನ?

6 days ago  
ಸುದ್ದಿ / One India/ News  
                 

ವೊಡಾಫೋನ್ ಐಡಿಯಾ 98 ರು ಪ್ರೀಪೇಯ್ಡ್, ಡಬ್ಬಲ್ ಡೇಟಾ

6 days ago  
ಸುದ್ದಿ / One India/ News  
ಬೆಂಗಳೂರು, ಮೇ 24: ಟೆಲಿಕಾಂ ಉದ್ಯಮದಲ್ಲೇ ಮೊದಲ ಬಾರಿಗೆ ತನ್ನ ರೀಟೇಲ್ ಮಳಿಗೆಗಳಲ್ಲಿ ಸಂಪರ್ಕ ರಹಿತ ರೀಚಾರ್ಜ್ ಸೌಲಭ್ಯವನ್ನು ಪರಿಚಯಿಸಿರುವ ವೊಡಾಫೋನ್ ಇಂಡಿಯಾ ಈಗ ತನ್ನ ಜನಪ್ರಿಯ ಪ್ರೀಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ನೀಡುತ್ತಿದೆ. ವೊಡಾಫೋನ್ ಐಡಿಯಾ 98 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ Add-on ಯೋಜನೆಯನ್ನು ಪರಿಷ್ಕರಿಸಲಾಗ್ಗಿಪೆ. ಇದರಿಂದ ಗ್ರಾಹಕರಿಗೆ ಹೆಚ್ಚುವರಿ  ಇಂಟರ್ನೆಟ್ ಡೇಟಾ ಸಿಗಲಿದೆ. ಗ್ರಾಹಕರು..
                 

ಕೊರೊನಾದಿಂದ ಜನರ ಕಾಪಾಡಲು ಸೆಲಿಬ್ರಿಟಿಯೊಬ್ಬ ಮಾಡಿದ ಮೋಡಿ!

6 days ago  
ಸುದ್ದಿ / One India/ News  
ಸೆನೆಗಲ್, ಮೇ 23: ಜಗತ್ತಿನಾದ್ಯಂತ ಕೊರೊನಾ ಹಾವಳಿ ಜೋರಾಗಿದೆ. ಯಾವುದೇ ದೇಶಗಳು ಇದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ ಸೆನೆಗಲ್ ಕೂಡ ಕೊರೊನಾ ಹಾವಳಿಗೆ ತುತ್ತಾಗಿದೆ. ಮುಸ್ಲಿಂ ಬಾಹುಳ್ಯದ ಬಡ ರಾಷ್ಟ್ರವಾಗಿರುವ ಈ ದೇಶದಲ್ಲಿಗ ರಂಜಾನ್ ಹಬ್ಬ ಆಚರಣೆಯಲ್ಲಿದೆ. ಚೆಚೆನ್ಯಾ ಗಣರಾಜ್ಯದ ಅಧ್ಯಕ್ಷನಿಗೆ ಕೊರೊನಾ, ಮಾಸ್ಕೋದಲ್ಲಿ ಪ್ರತ್ಯಕ್ಷ! ಹೀಗಾಗಿ ಜನರನ್ನು ಕೊರೊನಾದಿಂದ ದೂರ ಇಡಲು..
                 

ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯಲ್ಲಿ ಸಾಧಾರಣ ಮಳೆ

7 days ago  
ಸುದ್ದಿ / One India/ News  
ಬೆಂಗಳೂರು, ಮೇ 23: ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಕೊಡಗಿನ ಭಾಗಮಂಡಲದಲ್ಲಿ ಶುಕ್ರವಾರ ಮಳೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ 35.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರ್ಗಿಯಲ್ಲಿ ಅತಿ ಹೆಚ್ಚು ಅಂದ್ರೆ 43.1 ಡಿಗ್ರಿ ಗರಿಷ್ಠ..
                 

ಇದಪ್ಪಾ ವರಸೆ! ಭಾರತ-ನೇಪಾಳದ ನಡುವೆ ಚೀನಾಗೇನು ಕೆಲಸ?

7 days ago  
ಸುದ್ದಿ / One India/ News  
ನವದೆಹಲಿ, ಮೇ.22: ಕೊರೊನಾ ವೈರಸ್ ಸೋಂಕು ಜೀವ ಮತ್ತು ಜನಜೀವನಕ್ಕಷ್ಟೇ ಮುಳುವಾಗಿಲ್ಲ. ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳ ನಡುವೆ ಕೊವಿಡ್-19 ಕಿಚ್ಚು ಹೊತ್ತಿಸುತ್ತಿದೆ. ಕೊರೊನಾ ವೈರಸ್ ನೆಪದಲ್ಲೇ ಭಾರತದ ವಿರುದ್ಧ ನೆರೆಯ ರಾಷ್ಟ್ರ ನೇಪಾಳ ತಿರುಗಿ ಬಿದ್ದಿದೆ. ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಬಿಡುಗಡೆ ಮಾಡಿರುವ ಹೊಸ ನಕ್ಷೆಯು ತೀವ್ರ ವಿವಾದ ಸೃಷ್ಟಿಸಿದೆ. ನೇಪಾಳದ..
                 

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉನ್ನತ ಹುದ್ದೆ ಅಲಂಕರಿಸಿದ ಡಾ.ಹರ್ಷವರ್ಧನ್!

7 days ago  
ಸುದ್ದಿ / One India/ News  
ನವದೆಹಲಿ, ಮೇ 22: ಭಾರತದ ಕೋವಿಡ್-19 ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಇಂದು ವಿಶ್ವ ಆರೋಗ್ಯ ಸಂಸ್ಥೆ (WHO) ಯ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಕಾರ್ಯನಿರ್ವಾಹಕ ಮಂಡಳಿ (Executive Board) ಯ ಅಧ್ಯಕ್ಷರಾಗಿ ಇವತ್ತು ಡಾ.ಹರ್ಷವರ್ಧನ್ ಅಧಿಕಾರ ಸ್ವೀಕರಿಸಿದ್ದಾರೆ. ಜಪಾನಿನ ಡಾ.ಹಿರೋಕಿ ನಕಟಾನಿ ಯವರ ನಂತರ..
                 

ಬಿಯರ್ ಕೇಳೋವರೆ ಇಲ್ಲ, ಕಂಟ್ರಿ ಸಾರಾಯಿಯೇ ಎಲ್ಲಾ!

7 days ago  
ಸುದ್ದಿ / One India/ News  
                 

ಕಾಸರಗೋಡಿನಿಂದ ಬಂದ ಮೂವರ ವಿರುದ್ಧ ಕ್ರಿಮಿನಲ್ ಕೇಸ್

7 days ago  
ಸುದ್ದಿ / One India/ News  
                 

ಸ ರಘುನಾಥ ಅಂಕಣ; ಚಿಗುರ ನಗೆ ಕಾಣುವ ಕಣ್ಣಿಗೆ ಹಗೆಯ ಹೊಗೆ ಏಕೆ?

8 days ago  
ಸುದ್ದಿ / One India/ Column  
ಕಡಿದ ಹುಣಿಸೆಗಿಡಗಳ ಮೈತುಂಬ ಕೆಂಪು ಚಿಗುರು ಕಂಡ ನರಸಿಂಗರಾಯ ಅವಕ್ಕಿನ್ನು ಸಾವಿಲ್ಲವೆಂದು ತಿಳಿದು ಹರ್ಷಿತನಾದ. ತೋಪಿನ ಮಧ್ಯೆ ನಿಂತು ಹಸಿರಮ್ಮ ನಿನ್ನ ಕೊಲ್ಲುವ ಮನಸ್ಸುಗಳು ಹುಟ್ಟದಿರುವಂತೆ ಹರಸು ತಾಯೇ ಎಂದು ಪ್ರಾರ್ಥಿಸಿದ ಹೊತ್ತಿನಲ್ಲೇ ಗೆಳೆಯರು ಅಲ್ಲಿಗೆ ಬಂದರು. ಜೊತೆಯಲ್ಲಿ ಸುನಂದಾಳೂ. ಅವರಿಗೆ ನರಸಿಂಗರಾಯ ಆ ಚಿಗುರನ್ನು ತೋರಿಸಿದ. ಉಳಿದ ಗಿಡಗಳಿಗಿಂತ ಇವುಗಳಲ್ಲಿ ಫಸಲು ನಿಧಾನವಾಗುತ್ತೆ ಅಷ್ಟೆ. ಪುಣ್ಯಕ್ಕೆ..
                 

ಅಂತರ ರಾಜ್ಯ ಸಂಚಾರ; ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಪೊಲೀಸ್

8 days ago  
ಸುದ್ದಿ / One India/ News  
ಬೆಂಗಳೂರು, ಮೇ 22 : ಕರ್ನಾಟಕದಿಂದ ಅಂತರ ರಾಜ್ಯ ಸಂಚಾರ ನಡೆಸುವ ಜನರಿಗೆ ಕರ್ನಾಟಕದ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ಅಂತರ ರಾಜ್ಯ ಸಂಚಾರ ಮಾಡಬೇಕಾದರೆ ಕರ್ನಾಟಕ ಪೊಲೀಸರು ನೀಡುವ ಪಾಸು ಪಡೆಯುವ ಅಗತ್ಯವಿಲ್ಲ. ಶುಕ್ರವಾರ ಡಿಜಿ& ಐಜಿಪಿ ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ಹೋಗಲು ಪಾಸುಗಳ ಅಗತ್ಯವಿಲ್ಲ..
                 

ಆರ್ ಬಿಐ ಸಿಹಿಸುದ್ದಿ: ಮೂರು ತಿಂಗಳು ಇಎಂಐ ಮಾಡುವುದೇ ಬೇಕಿಲ್ಲ!

8 days ago  
ಸುದ್ದಿ / One India/ News  
ನವದೆಹಲಿ, ಮೇ.22: ಭಾರತ ಲಾಕ್ ಡೌನ್ 4.0ರ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಗ್ ರಿಲೀಫ್ ನೀಡಿದೆ. ಮೂರು ತಿಂಗಳ ಅವಧಿಗೆ ಇಎಂಐ ಪಾವತಿಸುವುದನ್ನು ವಿಸ್ತರಿಸಿದೆ. ಸಾಲದ ಮೇಲಿನ ಕಂತು ಪಾವತಿ ದಿನಾಂಕವನ್ನು ಜೂನ್.1ರಿಂದ ಆಗಸ್ಟ್.30ರವರೆಗೂ ವಿಸ್ತರಣೆ ಮಾಡಲಾಗಿದೆ. ಗೃಹಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲದ..
                 

ಮಾಡಿದ್ದುಣ್ಣೋ ಮಹಾರಾಯ: ಚೀನಾಗೂ ಬಿತ್ತು ಕೊರೊನಾ ವೈರಸ್ ಪೆಟ್ಟು!

8 days ago  
ಸುದ್ದಿ / One India/ News  
ಬೀಜಿಂಗ್, ಮೇ.22: ನೊವೆಲ್ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಚೀನಾ ಸರ್ಕಾರವು ಹೊಸ ಮಂತ್ರ ಜಪಿಸುತ್ತಿದೆ. ದೇಶದ ಆರ್ಥಿಕತೆಗೆ ಹಣಕಾಸಿನ ಬೆಂಬಲ ನೀಡುವ ಉದ್ದೇಶದಿಂದ ಈ ಸಾಲಿನಲ್ಲಿ ಜಿಪಿಡಿ ಗುರಿ ನಿಗದಿಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ. ಚೀನಾದಲ್ಲಿ ವಾರ್ಷಿಕ ಸಂಪುಟ ಸಭೆ ಆರಂಭಕ್ಕೂ ಮೊದಲು ಪ್ರೀಮಿಯರ್ ಲೀ ಕೆಕ್ಯೂಯಾಂಗ್ ಈ ಬಗ್ಗೆ ವರದಿ ಪ್ರಕಟಿಸಿದೆ...
                 

ಮಣಿಪುರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲು

8 days ago  
ಸುದ್ದಿ / One India/ News  
ಇಂಫಾಲ್, ಮೇ 22: ಮಣಿಪುರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಕೋವಿಡ್-19 ರೋಗದ ಆತಂಕದಲ್ಲಿರುವಾಗಲೇ ಮಣಿಪುರದಲ್ಲಿ ಭೂಕಂಪ ಸಂಭವಿಸಿದೆ. ಶುಕ್ರವಾರ ಮುಂಜಾನೆ 3.36 ರ ಸುಮಾರಿಗೆ ಮಣಿಪುರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ಕಂಡುಬಂದಿದೆ. ಮಣಿಪುರದ ಪೂರ್ವ ಭಾಗದ ಉಖ್ರುಲ್ ನಲ್ಲಿ ಕೇಂದ್ರ ಬಿಂದು ದಾಖಲಾಗಿದೆ. ದೆಹಲಿಯಲ್ಲಿ..
                 

ವ್ಹಾರೇ ವ್ಹಾ..! ಕೊರೊನಾ ವೈರಸ್ ಸೋಂಕಿತರ ಪತ್ತೆಗೆ ಮೊಬೈಲ್ ಆ್ಯಪ್!

8 days ago  
ಸುದ್ದಿ / One India/ News  
ನವದೆಹಲಿ, ಮೇ22: ಕೊರೊನಾ ವೈರಸ್ ಜಗತ್ತನ್ನು ಕಾಡುತ್ತಿರುವ ಮಾರಕ ರೋಗ ಯಾವಾಗ ಯಾರಿಗೆ ಹೇಗೆ ಅಂಟಿಕೊಳ್ಳುತ್ತೆ ಅನ್ನೋದೇ ಗೊತ್ತಾಗುತ್ತಿಲ್ಲ. ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊವಿಡ್-19 ವಿಶ್ವದಾದ್ಯಂತ ಹರಡಿದ್ದು, 50 ಲಕ್ಷಕ್ಕಿಂತ ಅಧಿಕ ಮಂದಿಗೆ ಅಂಟಿಕೊಂಡಿದೆ. ಕೆಮ್ಮು, ಜ್ವರ, ಶೀತ, ಉಸಿರಾಟ ತೊಂದರೆ, ಸ್ನಾಯುಸೆಳೆತ, ಎದೆನೋವು, ಹೀಗೆ 9ಕ್ಕಿಂತ ಹೆಚ್ಚು ಲಕ್ಷಣಗಳಲ್ಲಿ ಒಂದಾದ್ರೂ..
                 

ಸೋನಿಯಾ ವಿರುದ್ಧ ಎಫ್ಐಆರ್ ರದ್ದು ಮಾಡಲು ದುಂಬಾಲು ಬಿದ್ದ ಡಿಕೆಶಿ

8 days ago  
ಸುದ್ದಿ / One India/ News  
ಬೆಂಗಳೂರು, ಮೇ 21: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ದಾಖಲಿಸಿರುವ ಎಫ್ಐಆರ್ ವಾಪಸ್ ಪಡೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಗುರುವಾರ ಮನವಿ ಸಲ್ಲಿಸಿತು. ಜನರನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶ ಹೊಂದಿರುವ ಸೋನಿಯಾ ಗಾಂಧಿ ವಿರುದ್ಧದ ಪ್ರಕರಣ ಕೈಬಿಡಬೇಕು. ಪ್ರಕರಣ..
                 

ಮಾರ್ಗಸೂಚಿ ಉಲ್ಲಂಘನೆ; ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ

8 days ago  
ಸುದ್ದಿ / One India/ News  
ನವದೆಹಲಿ, ಮೇ 21 : ಕೊರೊನಾ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿಲ್ಲ. ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಇದನ್ನು ಪಾಲಿಸುತ್ತಿಲ್ಲ ಎಂಬುದನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ. ಗುರುವಾರ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಒಟ್ಟು 7 ಅಂಶಗಳನ್ನು..
                 

ದೇಶಿಯ ವಿಮಾನ ಸೇವೆ ಆರಂಭ; ರಾಜ್ಯಕ್ಕೆ ಆಗಮಿಸಿದರೆ ಕ್ವಾರಂಟೈನ್

8 days ago  
ಸುದ್ದಿ / One India/ News  
                 

ಸ್ವಿಗ್ಗಿಯಿಂದ ಮನೆ ಬಾಗಿಲಿಗೆ ಮದ್ಯ ಪೂರೈಕೆ

8 days ago  
ಸುದ್ದಿ / One India/ News  
ಬೆಂಗಳೂರು, ಮೇ 21, 2020: ಭಾರತದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್ ಫಾರ್ಮ್ ಆಗಿರುವ ಸ್ವಿಗ್ಗಿ ತನ್ನ ಆಪ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮದ್ಯವನ್ನು ತಲುಪಿಸುವ ಸೇವೆಯನ್ನು ಜಾರ್ಖಂಡ್ ರಾಜ್ಯದಲ್ಲಿ ಆರಂಭಿಸಿದೆ. ಸ್ವಿಗ್ಗಿ ಆಪ್ ನಲ್ಲಿನ ವೈನ್ ಶಾಪ್ ವಿಭಾಗದ ಮೂಲಕ ಈ ಸೇವೆಯನ್ನು ಜಾರ್ಖಂಡ್ ರಾಜ್ಯ ಸರ್ಕಾರದ ಅನುಮತಿ ಪಡೆದ ನಂತರ..
                 

ಟಾಟಾಟ್ರಸ್ಟ್ ನಿಂದ ಕೋವಿಡ್-19ಕುರಿತು ಕರ್ನಾಟಕದಲ್ಲಿ ಆರೋಗ್ಯ ಅಭಿಯಾನ; 4.5 ಲಕ್ಷಜನರಿಗೆ ತಲುಪುವ ನಿರೀಕ್ಷೆ

8 days ago  
ಸುದ್ದಿ / One India/ News  
ಬೆಂಗಳೂರು, ಮೇ 21: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಪ್ರಕಟಿಸಿರುವಂತೆ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಿವು ಮೂಡಿಸಲು ವಿಡಿಯೊ ಮತ್ತು ಆಡಿಯೊ ಸಂದೇಶಗಳ ಮೂಲಕ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಟಾಟಾಟ್ರಸ್ಟ್ ಹಮ್ಮಿಕೊಂಡಿದೆ. ಈ ಸಂದೇಶಗಳು ಸಾರ್ವಜನಿಕವಾಗಿ ಟಾಟಾಟ್ರಸ್ಟ್ ಸಾಮಾಜಿಕಜಾಲತಾಣ ವೇದಿಕೆಗಳಲ್ಲಿ ಲಭ್ಯವಿದೆ. ಯಾವುದೇ ಸಂಘಟನೆಗಳು ಕೂಡಾ ಇದನ್ನು ಡೌನ್‍ಲೋಡ್ ಮಾಡಿಕೊಂಡು..
                 

ಭಾರತದಲ್ಲಿ 14 ದಿನದಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಡಬಲ್!

8 days ago  
ಸುದ್ದಿ / One India/ News  
ನವದೆಹಲಿ, ಮೇ.21: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಭಾರತ ಲಾಕ್ ಡೌನ್ 4.0 ನಡುವೆ ದೇಶದಲ್ಲಿ ಏರಿಕೆಯಾಗುತ್ತಿರುವ ಕೊವಿಡ್-19 ಸೋಂಕಿತರ ಸಂಖ್ಯೆ 1.12 ಲಕ್ಷದ ಗಡಿ ದಾಟಿದೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 5,609 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೊರೊನಾ..
                 

ಚೀನಾದಲ್ಲಿ ಮುಖವಾಡ ಹೊತ್ತು ಹೊಸ ಲಕ್ಷಣಗಳೊಂದಿಗೆ ಬಂದ ಕೊರೊನಾವೈರಸ್

9 days ago  
ಸುದ್ದಿ / One India/ News  
ಬೀಜಿಂಗ್, ಮೇ 21: ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದ್ದ ಮಾರಣಾಂತಿಕ ಕೊರೊನಾವೈರಸ್ ಇದೀಗ ಹೊಸ ಮುಖವಾಡ ಹೊತ್ತು ಬೇರೆ ಲಕ್ಷಣಗಳೊಂದಿಗೆ ಬಂದಿದೆ. ಚೀನಾದ ಈಶಾನ್ಯ ಪ್ರದೇಶದ ರೋಗಿಗಳಲ್ಲಿ ಕೊರೊನಾ ವೈರಸ್ ಹೊಸ ರೂಪ ತಾಳಿರುವುದು ಗೋಚರವಾಗಿದೆ.ಕೊರೊನಾ ವೈರಸ್ 2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಒಟ್ಟು 3 ಲಕ್ಷಕ್ಕೂ ಹೆಚ್ಚು ಮಂದಿಯ..
                 

ಸಚಿವ ಸುರೇಶ ಕುಮಾರ್ ಹೇಳಿದ 'ವಂದೇ ಭಾರತ್' ಮನಮಿಡಿಯುವ ಕಥೆ...!

9 days ago  
ಸುದ್ದಿ / One India/ News  
ಬೆಂಗಳೂರು, ಮೇ 21: ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಒಂದೊಂದೆ ಕರುಣಾಜನಕ ಕಥೆಗಳು ಹೊರ ಬರುತ್ತಿವೆ. ದೇಶದಲ್ಲಿ ಕಾರ್ಮಿಕರ ಗೋಳು ಒಂದು ರೀತಿಯಾದರೆ, ವಿದೇಶದಲ್ಲಿ ಇದ್ದವರ ಕರಳು ಹಿಂಡುವ ವ್ಯಥೆಗಳು ಮತ್ತೊಂದು ರೀತಿ. ಕ್ರೂರಿ ಕೊರೊನಾ ವೈರಸ್ ಎದುರು ಎಲ್ಲರೂ ಒಂದೇ ಎಂಬುದು ಸಾಬೀತಾಗುತ್ತಿದೆ. ಬೆಂಗಳೂರಿನ ಒಬ್ಬ ಯುವತಿ. ತನ್ನ ಎಂಟೆಕ್ ವಿದ್ಯಾಭ್ಯಾಸದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು..
                 

ಶ್ರೀನಾಥ್ ಭಲ್ಲೆ ಅಂಕಣ; ಪರದೆ ಇಳಿದ ಮೇಲೂ ನೆನಪುಳಿಯುವ ಬದುಕು ನಮ್ಮದಾಗಲಿ

9 days ago  
ಸುದ್ದಿ / One India/ Column  
ಯಾವುದೇ ದೇಶ, ಭಾಷೆ, ಜಾತಿ ಮತ ಅಂತ ತೆಗೆದುಕೊಂಡರೂ ಅವರವರದ್ದೇ ಆದ ಸಭೆ ಸಮಾರಂಭಗಳು ಇರುತ್ತವೆ. ಆಯಾ ಸಮಾರಂಭಕ್ಕೆ ಮುಂಚೆ ಎಷ್ಟು ಕೆಲಸಗಳು ಇರುತ್ತದೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಕೆಲಸ ಸಮಾರಂಭದ ನಂತರ ಇರುತ್ತದೆ. ಆದರೆ ಎರಡೂ ಮನಸ್ಸಿನ ಭಾವನೆಗಳು ಮಾತ್ರ ವಿರುದ್ಧ ದಿಕ್ಕಿನದ್ದಾಗಿರುತ್ತದೆ. ನಮ್ಮದೇ ಪಯಣದ ಒಂದು ವಿಚಾರ ಕೈಗೆತ್ತಿಕೊಳ್ಳುತ್ತೇನೆ ಕೇಳಿ. ಭಾರತ ಪ್ರವಾಸ..
                 

ಕೊರೊನಾ ರಣಕೇಕೆ: ಭಾರತದಲ್ಲಿ ಮತ್ತೆ 5,609 ಮಂದಿಗೆ ಸೋಂಕು, 132 ಸಾವು

9 days ago  
ಸುದ್ದಿ / One India/ News  
ನವದೆಹಲಿ, ಮೇ 21: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾವೈರಸ್ ಅಟ್ಟಹಾಸ ಹೆಚ್ಚಾಗುತ್ತಿದೆ. ಇದೀಗ ಲಾಕ್‌ಡೌನ್ ಸಡಿಲಗೊಂಡಿದೆ, ಬಸ್‌ಗಳ ಸಂಚಾರವೂ ಆರಂಭಗೊಂಡಿದೆ. ಸೋಂಕು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ದೇಶದಲ್ಲಿ ಕೊರೊನಾವೈರಸ್ ಹಾವಳಿ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 5,609 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಾಮಾರಿ ವೈರಸ್ ಗೆ 132 ಮಂದಿ ಬಲಿಯಾಗಿದ್ದಾರೆಂದು..
                 

ಕೊರೊನಾ ವೈರಸ್ 50 ಲಕ್ಷದ ಗಡಿ ದಾಟಿದ ಮೇಲೆ WHO ಸಂದೇಶವೇನು?

9 days ago  
ಸುದ್ದಿ / One India/ News  
ನವದೆಹಲಿ, ಮೇ.21: ಚೀನಾದಲ್ಲಿ ಮೊದಲು ಕಾಣಿಸಿಕೊಂಡ ನೊವೆಲ್ ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ನಲುಗಿಸಿದೆ. ಜಾಗತಿಕ ಮಟ್ಟದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು 50 ಲಕ್ಷದ ಗಡಿ ದಾಟಿದೆ. ಬಡ ರಾಷ್ಟ್ರಗಳಲ್ಲಿ ದಿನೇ ದಿನೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ. ಕಳೆದ 24 ಗಂಟೆಗಳಲ್ಲೇ ವಿಶ್ವದಲ್ಲಿ 1,06,000 ಸೋಂಕಿತ..
                 

ಹಿರಿಯ ನಾಗರಿಕರಿಗೆ ಶುಭ ಸುದ್ದಿ ನೀಡಿದ ಮೋದಿ ಸರ್ಕಾರ

9 days ago  
ಸುದ್ದಿ / One India/ News  
ನವದೆಹಲಿ, ಮೇ 20: ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿರುವ ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸಲಾಗಿದೆ. ಈ ಮೂಲಕ ಲಾಕ್ಡುನ್ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರವು ನೆಮ್ಮದಿಯ ಸುದ್ದಿ ಕೊಟ್ಟಿದೆ. ಈ ಯೋಜನೆಯ ಕೊನೆ ದಿನಾಂಕವನ್ನು 2020 ರ ಮಾರ್ಚ್ 31 ರ ಬದಲಿಗೆ ಮುಂದಿನ ಮೂರು ವರ್ಷಗಳ..